Vedha: ಶಿವರಾಜ್ಕುಮಾರ್ಗೆ ಕುರಿ ಮರಿ ಗಿಫ್ಟ್ ನೀಡಿ, ಕಂಬಳಿ ಹೊದಿಸಿ ಗೌರವಿಸಿದ ಫ್ಯಾನ್ಸ್
Shivarajkumar: ಅಭಿಮಾನಿಗಳು ಶಿವರಾಜ್ಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಕುರಿ ಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಖ್ಯಾತ ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್ಕುಮಾರ್ (Shivarajkumar) ಅವರ ಕಾಂಬಿನೇಷನ್ನಲ್ಲಿ ‘ವೇದ’ ಸಿನಿಮಾ (Vedha Movie) ಮೂಡಿಬಂದಿದೆ. ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಮಾತ್ರ ಬಾಕಿ ಇದೆ. ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಶಿವರಾಜ್ಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಕುರಿ ಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ, ಕಂಬಳಿ ಹೊದಿಸಿ ಗೌರವಿಸಿದ್ದಾರೆ. ಈ ವೇಳೆ ಗೀತಾ ಶಿವರಾಜ್ಕುಮಾರ್ (Geetha Shivarajkumar) ಕೂಡ ಹಾಜರಿದ್ದರು. ಡಿಸೆಂಬರ್ 23ರಂದು ‘ವೇದ’ ಚಿತ್ರ ತೆರೆಕಾಣಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 20, 2022 07:00 AM