Puneeth Rajkumar: ನಟಿ ಆಶಾರಾಣಿ ಸೀರೆ ಮೇಲೆ ಪುನೀತ್ ಭಾವಚಿತ್ರ; ಇದು ಅಭಿಮಾನದ ಡಿಸೈನ್
ಹಿರಿಯ ನಟಿ ಆಶಾರಾಣಿ ಅವರ ತಮ್ಮ ಸೀರೆ ಮೇಲೆ ಪುನೀತ್ ರಾಜ್ಕುಮಾರ್ ಭಾವಚಿತ್ರ ಬಿಡಿಸಿದ್ದಾರೆ. ಆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಅಭಿಮಾನಿಗಳು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ವಿಶೇಷ ಸಂದರ್ಭದಲ್ಲೂ ಅವರನ್ನು ಸ್ಮರಿಸುವ ಕಾರ್ಯ ಆಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲದೆ ನಟ-ನಟಿಯರು ಕೂಡ ಅಪ್ಪುಗೆ ವಿವಿಧ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಹಿರಿಯ ನಟಿ ಆಶಾರಾಣಿ (Asharani) ಅವರ ತಮ್ಮ ಸೀರೆ ಮೇಲೆ ಪುನೀತ್ ರಾಜ್ಕುಮಾರ್ ಭಾವಚಿತ್ರ ಬಿಡಿಸಿದ್ದಾರೆ. ಈ ವಿಶೇಷ ವಿನ್ಯಾಸದ ಸೀರೆಯಲ್ಲಿ ಧರಿಸಿ ಅವರು ಸುದ್ದಿಗೋಷ್ಠಿಗೆ ಹಾಜರಾಗಿದ್ದಾರೆ. ಈ ಸೀರೆ ತಯಾರಾಗಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 19, 2022 07:31 PM
Latest Videos