ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಕಿಚ್ಚ ಸುದೀಪ್ ಅವರು ಯಾವುದೇ ಬಿಗ್ ಬಾಸ್ ಸ್ಪರ್ಧಿಯನ್ನು ಬೆಂಬಲಿಸೋದಿಲ್ಲ. ಈಗ ಸುದೀಪ್ ಎದುರೇ ಅವರು ಕಿಚ್ಚ ಕಿಚ್ಚ ಎಂದು ಕೂಗಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಗಿಲ್ಲಿ ನಟ ಅವರ ಅಭಿಮಾನ ಏನು ಎಂಬುದು ಗೊತ್ತಾಗಿದೆ ಎಂದೇ ಹೇಳಬಹುದು.
ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕುಣಿಗಲ್ ಉತ್ಸವಕ್ಕೆ ತೆರಳಿದ್ದರು. ವೇದಿಕೆ ಮೇಲೆ ಮಾತನಾಡುವಾಗ ಅವರು ಬಿಗ್ ಬಾಸ್ ವಿಷಯವನ್ನು ಪ್ರಸ್ತಾಪ ಮಾಡಿದರು. ‘ಈ ವಾರ ಫಿನಾಲೆ ನೋಡ್ತಾ ಇದೀರಾ’ ಎಂದು ಕೇಳಿದರು ಮತ್ತು ನೆರೆದಿದ್ದ ಅನೇಕರು ಗಿಲ್ಲಿ ಗಿಲ್ಲಿ ಎಂದು ಘೋಷಣೆ ಕೂಗಿದರು. ಆಗ ಸುದೀಪ್ ಅವರು ‘ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ’ ಎಂದು ನೇರವಾಗಿ ಹೇಳಿದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.