ಯಾದಗಿರಿ: ಸಂಪ್ರದಾಯಿಕ ಬೆಳೆಗೆ ಗುಡ್ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸುರಪುರ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದ ರೈತ ಹಯ್ಯಾಳಪ್ಪ ಸಾಹುಕಾರರು 18 ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆಯನ್ನು ಬೆಳೆದು ವಾರ್ಷಿಕ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. 2013 ರವರೆಗೆ ಸಾಂಪ್ರದಾಯಿಕ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದ ಅವರು, ತೋಟಗಾರಿಕೆಯತ್ತ ಒಲವು ತೋರಿ ಯಶಸ್ವಿಯಾಗಿದ್ದಾರೆ. ಇದು ಸಾಂಪ್ರದಾಯಿಕ ಕೃಷಿಯಿಂದ ತೋಟಗಾರಿಕೆಗೆ ಮಾರ್ಪಾಡು ಮಾಡುವುದರಿಂದ ಸಿಗುವ ಲಾಭವನ್ನು ತೋರಿಸುತ್ತದೆ.
ಯಾದಗಿರಿ, ಮಾರ್ಚ್ 03: ಸುರಪುರ ತಾಲೂಕಿನ ಲಿಂಗದಳ್ಳಿ ಗ್ರಾಮದ ರೈತ ಹಯ್ಯಾಳಪ್ಪ ಸಾಹುಕಾರ್ ಭರ್ಜರಿಯಾಗಿ ತೋಟಗಾರಿಕೆ ಬೆಳೆಯನ್ನ ಬೆಳೆದು ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ. 18 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆ ಬೆಳೆದು ವರ್ಷಕ್ಕೆ ಲಕ್ಷಾಂತರ ರೂ. ಲಾಭ ಪಡೆಯುತ್ತಿದ್ದಾರೆ. 2013 ರ ತನಕ ಹಯ್ಯಾಳಪ್ಪನ ಹಿರಿಯರು ಸಂಪ್ರದಾಯಿಕ ಬೆಳೆಗಳಾದ ಹತ್ತಿ, ತೊಗರಿ, ಜೋಳವನ್ನ ಬೆಳೆಯುತ್ತಿದ್ದರು. ಅಷ್ಟು ಲಾಭ ಸಿಗದೆ ನಷ್ಟ ಅನುಭವಿಸುತ್ತಿದ್ದರು. ಆಸರೆ, ಹಯ್ಯಾಳಪ್ಪ ಕೃಷಿ ಮಾಡಲು ಆರಂಭಿಸಿದ ಬಳಿಕ ಸಂಪ್ರದಾಯಿಕ ಬೆಳೆಗಳಿಗೆ ಗುಡ್ ಬೈ ಹೇಳಿದ್ದಾರೆ. ಕಳೆದ 12 ವರ್ಷಗಳಿಂದ ನಾನಾ ರೀತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾ ಭರ್ಜರಿಯಾಗಿ ಲಾಭ ಪಡೆಯುತ್ತಿದ್ದಾರೆ.