ಚಿಕ್ಕಬಳ್ಳಾಪುರ, ಸೆ.29: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿದ್ದು, ಇದನ್ನು ವಿರೋಧಿಸಿ ಇಂದು(ಸೆ.29) ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಇದರ ಪರಿಣಾಮ ಇದೀಗ ಚಿಕ್ಕಬಳ್ಳಾಪುರ(Chikkaballapura) ಹೂ ಬೆಳೆಗಾರರ ಮೇಲೆ ಬೀರಿದೆ. ಹೌದು, ಕರ್ನಾಟಕ ಬಂದ್ ಹಿನ್ನಲೆ ವರ್ತಕರು ಹೂ ಮಾರುಕಟ್ಟೆಗೆ ಬರುತ್ತಿಲ್ಲ. ಹೂಗಳನ್ನು ಕೇಳೋರೋಲ್ಲದೆ ಮಾರುಕಟ್ಟೆಯಲ್ಲೇ ತರೆಹೇವಾರಿ ಹೂಗಳು ಕೊಳೆಯುತ್ತಿದೆ. ಈ ಹಿನ್ನಲೆ ಹೂವುಗಳ ಬೆಲೆ(Flowers Rate)ಕೂಡ ದಿಢೀರ್ ಕುಸಿದಿದೆ. ಕಷ್ಟ ಪಟ್ಟು ಬೆಳೆದ ಹೂಗಳಿಗೆ ಬೆಲೆ ಇಲ್ಲ ಎಂದು ಮಾರುಕಟ್ಟೆಯಲ್ಲಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ