ಕೊಪ್ಪಳ; ಮಳೆ ಇಲ್ಲದೆ ಹೂ ಕಾಯಿಯಾಗ್ತಿಲ್ಲ, ತಾವೇ ಬೆಳೆದ ಬೆಳೆಯನ್ನು ಕಿತ್ತು ಹಾಕಿದ ರೈತರು

Edited By:

Updated on: Jul 16, 2024 | 5:09 PM

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಕಾಳು ಬೆಳೆದಿದ್ದರು. ಹೂವು ಆದ್ರೂ ಕಾಯಿಯಾಗದೇ ಇರೋದರಿಂದ ರೈತರು ಬೆಳೆ ನಾಶ ಮಾಡಿದ್ದಾರೆ. ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊಪ್ಪಳ, ಜುಲೈ.16: ಎಲ್ಲಾ ಕಷ್ಟಗಳನ್ನು ಅನುಭವಿಸಿ ಮಗುವಂತೆ ಮುದ್ದಾಗಿ ಸಾಕಿದ್ದ ಬೆಳೆಯನ್ನು ರೈತ ತನ್ನ ಕೈಯಿಂದಲೇ ಕಿತ್ತು ಹಾಕಿದ್ದಾನೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಮಳೆ ಕೊರತೆಯಿಂದಾಗಿ ಕಾಯಿಯಾಗದೇ ಬೆಳೆ ಹಾಳಾಗಿದ್ದು ಎರಡು ತಿಂಗಳ ಕಾಲ ಕಷ್ಟ ಪಟ್ಟು ಬೆಳೆಸಿದ್ದ ಹೆಸರು ಬೇಳೆ ಬೆಳೆಯನ್ನು ರೈತ ನಾಶ ಮಾಡಿದ್ದಾನೆ. ತಾವೇ ಬೆಳೆದ ಬೆಳೆಯನ್ನು ತಾವೇ ಕಿತ್ತು ಹಾಕಿ ದುಃಖ ಅನುಭವಿಸಿದ್ದಾನೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಕಾಳು ಬೆಳೆದಿದ್ದರು. ಹೂವು ಆದ್ರೂ ಕಾಯಿಯಾಗದೇ ಇರೋದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಕಾಯಿಯಾದ್ರು ಕೂಡಾ ಅವುಗಳಿಗೆ ಕೀಟಬಾಧೆ ಆವರಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಇರೋದರಿಂದ ಕಂಗಾಲಾದ ರೈತರು ತಮ್ಮ ಕೈಯಾರೆ ಬೆಳೆ ನಾಶ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ತಾಲೂಕಿನ ಹಲವಡೆ ಹೆಸರು ಬೆಳೆ ಕಾಯಿಯಾಗದೆ ಭಾರೀ ನಷ್ಟ ಎದುರಾಗಿದೆ. ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jul 16, 2024 09:53 AM