Farmers wait for Monsoon: ಮಳೆಯಾಗದೆ ಹಾವೇರಿ ಜಿಲ್ಲೆ ರೈತರು ಕಂಗಾಲು, ಎರಡು ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ್ದೆಲ್ಲ ಹಾಳು!

ಅರುಣ್​ ಕುಮಾರ್​ ಬೆಳ್ಳಿ

Updated on: Jun 08, 2023 | 2:04 PM

ಮಾನ್ಸೂನ್ ಈಗಾಗಲೇ ಆರಂಭವಾಗಬೇಕಿತ್ತು, ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ್ದೆಲ್ಲ ನಾಶವಾಗುತ್ತದೆ ಎಂದು ರೈತ ಹೇಳುತ್ತಾರೆ.

ಹಾವೇರಿ: ಒಂದೆಡೆ ಅಕಾಲಿಕ ಮಳೆಯಿಂದ (untimely rains) ಬಾಳೆ, ಮಾವು, ದಾಳಿಂಬೆ ಮೊದಲಾದ ತೋಟಗಾರಿಕಾ ಬೆಳೆಗಳು ಹಾಳಾದರೆ, ಮಳೆಯಾಗದ ಕಾರಣ ಬಿತ್ತಿದ ಬೀಜಗಳು ಮೊಳಕೆಯೊಡೆದರೂ ಒಣಗಿ (withering away) ಹೋಗುತ್ತಿರುವ ಸ್ಥಿತಿ ಮತ್ತೊಂದು ಕಡೆ. ಹಾವೇರಿ ಜಿಲ್ಲೆಯ ರೈತ ಹೇಳುತ್ತಿರುವುದನ್ನು ಕೇಳಿಸಿಕೊಂಡರೆ ಉತ್ತರ ಕರ್ನಾಟಕ ಭಾಗದ ರೈತಾಪಿ ಜನ ಅನುಭವಿಸುತ್ತಿರುವ ಯಾತನೆ ಗೊತ್ತಾಗುತ್ತದೆ. ಮಾನ್ಸೂನ್ (monsoon) ಈಗಾಗಲೇ ಆರಂಭವಾಗಬೇಕಿತ್ತು, ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ್ದೆಲ್ಲ ನಾಶವಾಗುತ್ತದೆ ಎಂದು ರೈತ ಹೇಳುತ್ತಾರೆ. ಮಳೆಯಾಗದ ಸ್ಥಿತಿಯಲ್ಲಿ ಬಿತ್ತನೆ ಕಾರ್ಯ ಮತ್ತೊಮ್ಮೆ ನಡೆಸಬೇಕಾಗುತ್ತದೆ, ಹಾಗಾಗಿ ಬಿತ್ತನೆ ಬೀಜ, ರಸಗೊಬ್ಬರ ಮೊದಲಾದವು ಸಬ್ಸಿಡಿ ದರದಲ್ಲಿ ರೈತರಿಗೆ ಸಿಗುವ ಹಾಗೆ ಕೃಷಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.