ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅಲಿಕಲ್ಲು ಸಮೇತ ಜೋರು ಮಳೆ, ರೈತರಲ್ಲಿ ಸಂತಸ

|

Updated on: May 08, 2024 | 10:22 AM

ಏಪ್ರಿಲ್ ಮತ್ತು ಮೇ ನಲ್ಲಿ ಮಳೆಯಾದರೆ ಅಕಾಲಿಕ ಮಳೆ ಅನ್ನುತ್ತಾರೆ. ಇದರಿಂದ ಬೇಸಾಯಕ್ಕೆ ಹೇಳಿಕೊಳ್ಳುವ ಪ್ರಯೋಜನವಾಗದು. ಆದರೆ ಕಳೆದ ವರ್ಷ ಮಳೆಯ ಅಭಾವದಿಂದಾಗಿ ಕೆರೆಕುಂಟೆಗಳು, ಹಳ್ಳಕೊಳಗಳು ಬತ್ತಿ ಹೋಗಿವೆ. ನದಿಗಳೇ ಬತ್ತಿ ಹೋಗಿರುವಾಗ ಕೆರೆಕುಂಟೆ ಯಾವ ಲೆಕ್ಕ ಬಿಡಿ. ಹೇಳುವ ತಾತ್ಪರ್ಯವೇನೆಂದರೆ ಭೀಕರ ಬರದ ದಿನಗಳಲ್ಲಿ ಒಂದು ಚಿಕ್ಕ ಮಳೆಯಾದರೂ ಅದು ರೈತರಲ್ಲಿ ಹರ್ಷವನ್ನುಂಟು ಮಾಡುತ್ತದೆ.

ತುಮಕೂರು: ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗುತ್ತಿರುವುದು ಜನರಲ್ಲಿ ಸಂತೋಷವನ್ನುಂಟು ಮಾಡಿದೆ. ಸೋಮವಾರ ಸಾಯಂಕಾಲ ಬೆಂಗಳೂರು ನಗರ ಪ್ರದೇಶ (Bengaluru city) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿಯಿತು. ಅದಕ್ಕೂ ಮೊದಲು ಅಂದರೆ ಶನಿವಾರ ದೇವನಹಳ್ಳಿ (Devanahalli) ಏರಿಯಾದಲ್ಲಿ ಮಳೆಯಾಗಿತ್ತು. ನಿನ್ನರ ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಮಳೆಯಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ (Chikkanayakanahalli taluk) ಹುಳಿಯಾರು ಮತ್ತು ಬೇರೆ ಕೆಲವು ಗ್ರಾಮಗಳಲ್ಲಿ ನಿನ್ನೆ ಮಳೆಯಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಿನ್ನೆಯ ಮಳೆಯಲ್ಲಿ ಹೇರಳವಾಗಿ ಆಲಿಕಲ್ಲು ಸಹ ಸುರಿದಿವೆ. ಹಾಗೆ ನೋಡಿದರೆ, ಏಪ್ರಿಲ್ ಮತ್ತು ಮೇ ನಲ್ಲಿ ಮಳೆಯಾದರೆ ಅಕಾಲಿಕ ಮಳೆ ಅನ್ನುತ್ತಾರೆ. ಇದರಿಂದ ಬೇಸಾಯಕ್ಕೆ ಹೇಳಿಕೊಳ್ಳುವ ಪ್ರಯೋಜನವಾಗದು. ಆದರೆ ಕಳೆದ ವರ್ಷ ಮಳೆಯ ಅಭಾವದಿಂದಾಗಿ ಕೆರೆಕುಂಟೆಗಳು, ಹಳ್ಳಕೊಳಗಳು ಬತ್ತಿ ಹೋಗಿವೆ. ನದಿಗಳೇ ಬತ್ತಿ ಹೋಗಿರುವಾಗ ಕೆರೆಕುಂಟೆ ಯಾವ ಲೆಕ್ಕ ಬಿಡಿ. ಹೇಳುವ ತಾತ್ಪರ್ಯವೇನೆಂದರೆ ಭೀಕರ ಬರದ ದಿನಗಳಲ್ಲಿ ಒಂದು ಚಿಕ್ಕ ಮಳೆಯಾದರೂ ಅದು ರೈತರಲ್ಲಿ ಹರ್ಷವನ್ನುಂಟು ಮಾಡುತ್ತದೆ. ಹಾಗಾಗಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರೈತರು ಖುಷಿ ಅನುಭವಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಣ ಬಿಸಿಲಿಂದ ಬಸವಳಿದಿದ್ದ ಕೋಲಾರದ ಕೆಜಿಎಫ್ ನಲ್ಲಿ ಮಳೆಯ ಸಿಂಚನ, ಜನರಲ್ಲಿ ಕೊಂಚ ನಿರಾಳತೆ