Rain Alert: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯ ಮುನ್ಸೂಚನೆ
ಬಿಸಿಲಿನ ಬೇಗೆಗೆ ಕಂಗಾಲಾಗಿದ್ದ ಬೆಂಗಳೂರು ಜನರು ಮೊನ್ನೆಯಿಂದ ಶುರುವಾದ ಮಳೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅದರಂತೆ ಇನ್ನು ಮೂರು ದಿನ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ(Bengaluru rain predcitions) ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಮೇ 7ರ ಬಳಿಕ ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಲಿದೆ.
ಬೆಂಗಳೂರು, ಮೇ.04: ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಸಾಧಾರಣ ಮಳೆಯಾಗುವ(Bengaluru rain predcitions) ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 7 ಮತ್ತು 8ರ ನಂತರ ಬೆಂಗಳೂರಲ್ಲಿ ಮಳೆ ಹೆಚ್ಚಳವಾಗುವ ಸಂಭವವಿದೆ. ಇನ್ನು ಮುಂದಿನ ಮೂರು ದಿನ ಕೂಡ ಉಷ್ಣಾಂಶ ಗರಿಷ್ಠ 38°, ಕನಿಷ್ಠ 24° ತಾಪಮಾನ ಮುಂದುವರಿಯಲಿದ್ದು, ಉಷ್ಣಾಂಶ ಹಿನ್ನಲೆ ಬಿಸಿ ಹಾಗೂ ಆರ್ದ್ರ ವಾತಾವರಣ ಇರಲಿದೆ.
ರಾಜ್ಯದ ಹಲವೆಡೆ ಮಳೆ
ಇನ್ನು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಮೇ 7ರ ಬಳಿಕ ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಲಿದೆ. ಇತ್ತ ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆಯಲಿದೆ.
ಇದನ್ನೂ ಓದಿ:ಹವಾಮಾನ ಇಲಾಖೆ ಹೇಗೆ ಕೆಲಸ ಮಾಡುತ್ತದೆ? ಮಳೆ ಮುನ್ಸೂಚನೆಗೆ ಈಗ ಬಳಸುತ್ತಿರುವ ತಂತ್ರಜ್ಞಾನ ಯಾವುದು?
GFS predicts Good rainfall activity over Karnataka till May 19th for the next 3 weeks giving much needed respite from suffering the long spell of dry & hot weather conditions
Interesting days ahead#KarnatakaRains #BengaluruRains pic.twitter.com/Ih8GOEhghF
— Karnataka Weather (@Bnglrweatherman) May 3, 2024
ಮೇ 19ರ ನಂತರ ಸತತ ಮೂರು ವಾರಗಳ ಮಳೆ ಸಾಧ್ಯತೆ
ಗ್ಲೋಬಲ್ ಫೋರ್‌ಕಾಸ್ಟ್ ಸಿಸ್ಟಮ್ (GFS) ಸಂಸ್ಥೆಯಿಂದ ವರದಿ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮೇ 19ರ ವರೆಗೆ ಆಗಾಗ ಮಳೆ ಹಾಗೂ 19ರ ನಂತರ ಸತತ ಮೂರು ವಾರಗಳ ಮಳೆ ಸಾಧ್ಯತೆಯಿದೆ ಎನ್ನಲಾಗಿದೆ. ಬರದಿಂದ ಹೈರಾಣಾಗಿರುವ ರಾಜ್ಯಕ್ಕೆ ಮುಂದಿನ ಮೂರು ವಾರಗಳ ಕಾಲ ಸತತ ಮಳೆಯಾಗಲಿದೆ. ರಾಷ್ಟ್ರೀಯ ನೈಸರ್ಗಿಕ ಹವಾಮಾನ ಪ್ರೆಡಿಕ್ಷನ್ ಸಂಸ್ಥೆಯಾಗಿರುವ ‘GFS Interesting Days ahead’ ಎಂದು ಟ್ವೀಟ್ ಮಾಡಿದ್ದು, ರಾಜ್ಯ ಹವಾಮಾನ ಇಲಾಖೆಯು ಎಕ್ಸ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Sat, 4 May 24