Founder of Universal Solidarity Movement: ಕ್ರೈಸ್ತ ಪಾದ್ರಿಯೊಬ್ಬರ ಅಂತ್ಯಸಂಸ್ಕಾರ ಮಂತ್ರಘೋಷಗಳ ನಡುವೆ ವಿದ್ಯುತ್ ಚಿತಾಗಾರದಲ್ಲಿ ನಡೆಯಿತು!

|

Updated on: Mar 29, 2023 | 7:30 PM

ಜಾಗತಿಕ ಐಕ್ಯತೆ ಚಳುವಳಿಯನ್ನು ಹುಟ್ಟು ಹಾಕಿದ ಫಾದರ್ ವರ್ಗೀಸ್ ಅಲೆಂಗಾಡೆನ್ ಅವರ ಅಂತ್ಯಕ್ರಿಯೆಯನ್ನು ರಾಮ್ ಬಾಗ್ ಮುಕ್ತಿಧಾಮದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಮಂಗಳವಾರ ನಡೆಸಲಾಯಿತು.

ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ 70—ವರ್ಷ ವಯಸ್ಸಿನ ಕ್ರೈಸ್ತ ಪಾದ್ರಿಯ ಅಂತ್ಯ ಸಂಸ್ಕಾರವನ್ನು ಮಂತ್ರಘೋಷಗಳ ನಡುವೆ ವಿದ್ಯುತ್ ಚಿತಾಗಾರವೊಂದರಲ್ಲಿ (crematorium) ನಡೆಸಲಾಯಿತು ಅಂತ ಹೇಳಿದರೆ ನಂಬುವುದು ಕಷ್ಟವೇ. ಅದಕ್ಕೂ ಮೊದಲು ಅಗಲಿದ ಪಾದ್ರಿಯವರಿಗಾಗಿ ಸರ್ವಧರ್ಮ ಪ್ರಾರ್ಥನಾ ಕೂಟವೊಂದನ್ನು ನಡೆಸಲಾಯಿತು. ಜಾಗತಿಕ ಐಕ್ಯತೆ ಚಳುವಳಿಯನ್ನು ಹುಟ್ಟು ಹಾಕಿದ ಫಾದರ್ ವರ್ಗೀಸ್ ಅಲೆಂಗಾಡೆನ್ (Varghese Alengaden) ಅವರ ಅಂತ್ಯಕ್ರಿಯೆಯನ್ನು (final rites) ರಾಮ್ ಬಾಗ್ ಮುಕ್ತಿಧಾಮದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಮಂಗಳವಾರ ನಡೆಸಲಾಯಿತು.

ಇದನ್ನೂ ಓದಿ: ರಾಮನಗರ: ರಾಮದೇವರ ಬೆಟ್ಟದಲ್ಲಿ ರಾಮಮಂದಿರದ ಮಾದರಿ ವಿಡಿಯೋ ಬಿಡುಗಡೆ

‘ಸತ್ತ ನಂತರ ತಮ್ಮ ದೇಹವನ್ನು ಕ್ರೈಸ್ ಪದ್ಧತಿಯ ಪ್ರಕಾರ ಮಣ್ಣಲ್ಲಿ ಸಮಾಧಿ ಮಾಡದೆ ಸುಟ್ಟುಬಿಡಬೇಕು ಎಂದು ಫಾದರ್ ಅವರು ಹೇಳಿದ್ದರಿಂದ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದೇವೆ. ತಮ್ಮ ಬದುಕಿನುದ್ದಕ್ಕೂ ಅವರು ತಮ್ಮ ಹೆಸರಿಗೆ ಯಾವುದೇ ಅಸ್ತಿ ಮಾಡಿಕೊಂಡರಲಿಲ್ಲ. ಅವರ ಹೆಸರಿಗೆ ಜಮೀನಿರಲಿಲ್ಲ, ಮನೆಯಿರಲಿಲ್ಲ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಕೂಡ ಇರಲಿಲ್ಲ. ಬದುಕಿದ್ದಾಗ ತಾನು ಯಾವುದೇ ಆಸ್ತಿ ಹೊಂದಿರದ ಕಾರನ ಸತ್ತಾಗಲೂ ಸಮಾಧಿ ಮಾಡಲು 6 ಅಡಿ ಜಾಗ ಸಹ ತನಗೆ ಸೇರಬಾರದು, ಎಂದು ಅವರು ಹೇಳಿದ್ದರು,’ ಅಂತ ಫಾದರ್ ಅಲೆಂಗಾಡೆನ್ ಸಹವರ್ತಿಯಾಗಿದ್ದ ನೀತು ಜೋಶಿ ಹೇಳುತ್ತಾರೆ.
ಕೇವಲ ಎರಡು ತಿಂಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅಲೆಂಗಾಡೆನ್ ಶ್ವಾಸಕೋಶದ ಸಮಸ್ಯೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದೋರ್ ನಗರದ ಆಸ್ಪತ್ರೆಯೊಂದರಲ್ಲಿ ಅವರು ಮಾರ್ಚ್ 26 ರಂದು ಕೊನೆಯುಸಿರೆಳೆದರು.

‘ಶವಸಂಸ್ಕಾರ ನಡೆಯವ ಸಮಯದಲ್ಲಿ ತಾವು ರಚಿಸಿದ ಹಾಡುಗಳನ್ನು ನುಡಿಸಬೇಕು ಮತ್ತು 8 ಧರ್ಮಗಳ ಪವಿತ್ರ ಗ್ರಂಥಗಳ ಪಾರಾಯಣವಾಗಬೇಕು ಎಂದು ಫಾದರ್ ಹೇಳಿದ್ದರಿಂದ ಅದನ್ನು ರೆಡ್ ಚರ್ಚ್ ನಲ್ಲಿ ನಡೆಸಿದ ಪ್ರಾರ್ಥನಾ ಕೂಟದಲ್ಲಿ ನೆರವೇರಿಸಲಾಯಿತು,’ ಎಂದು ನೀತು ಜೋಶಿ ಹೇಳಿದರು.

ಇದನ್ನೂ ಓದಿ: Amritpal Singh: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಅಮೃತಪಾಲ್ ಸಿಂಗ್, ಪಂಜಾಬ್ ಪೊಲೀಸರ ಮುಂದಿರಿಸಿದ 3 ಷರತ್ತುಗಳೇನು?

ಪಾದ್ರಿ ಅಲೆಂಗಾಡೆನ್ ಅವರ ಅಂತಿಮ ಸಂಸ್ಕಾರ ನಡೆಸುವ ಮೊದಲು ಎಲ್ಲ ಧರ್ಮಗಳ ಜನ ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ಸಿಗುವಂತಾಗಲು ಅವರ ಪಾರ್ಥೀವ ಶರೀರವನ್ನು ನಗರದ ರೆಡ್ ಚರ್ಚ್ ಇರಿಸಲಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 29, 2023 07:30 PM