AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್‌ಲೈನ್ ಹೂಡಿಕೆ ವಂಚನೆ ಬಗ್ಗೆ ಎಚ್ಚರ: ಲಕ್ಷಾಂತರ ರೂ. ಕಳೆದುಕೊಂಡ ಸಾವಿರಾರು ಹೂಡಿಕೆದಾರರು

ಆನ್‌ಲೈನ್ ಹೂಡಿಕೆ ವಂಚನೆ ಬಗ್ಗೆ ಎಚ್ಚರ: ಲಕ್ಷಾಂತರ ರೂ. ಕಳೆದುಕೊಂಡ ಸಾವಿರಾರು ಹೂಡಿಕೆದಾರರು

ಬಸವರಾಜ್​ ಯರಗಣವಿ
| Edited By: |

Updated on: Oct 19, 2026 | 2:36 PM

Share

ಎಫ್‌ಬಿಟಿ ಆಪ್ ಮೂಲಕ ರಾಜ್ಯದಲ್ಲಿ ಭಾರಿ ಆನ್‌ಲೈನ್ ಹೂಡಿಕೆ ವಂಚನೆ ಬೆಳಕಿಗೆ ಬಂದಿದೆ. ದೊಡ್ಡ ಹೊಟೇಲ್‌ಗಳಲ್ಲಿ ಸಭೆ ನಡೆಸಿ, ಆಮಿಷವೊಡ್ಡಿ ಸಾವಿರಾರು ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿದೆ. 18,500 ರೂಪಾಯಿ ಹೂಡಿಕೆಗೆ ಹೆಚ್ಚಿನ ಲಾಭದ ಭರವಸೆ ನೀಡಲಾಗಿತ್ತು. ಬೆಂಗಳೂರು, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಶಿವಮೊಗ್ಗ, ಅಕ್ಟೋಬರ್ 19: ರಾಜ್ಯದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಎಫ್‌ಬಿಟಿ (FBT – Future Book See Technology) ಆಪ್ ಮೂಲಕ ನಡೆಯುತ್ತಿರುವ ಬೃಹತ್ ಹೂಡಿಕೆ ವಂಚನೆಯೊಂದು ಬೆಳಕಿಗೆ ಬಂದಿದೆ. ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಆಕರ್ಷಕ ಸಭೆಗಳನ್ನು ನಡೆಸಿ, ಜನರಿಗೆ ಬಗೆಬಗೆಯ ಲಾಭದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿದೆ. ಆರಂಭದಲ್ಲಿ 18,500 ರೂಪಾಯಿ ಹೂಡಿಕೆಗೆ ಪ್ರತಿ ತಿಂಗಳು 658 ರೂಪಾಯಿ ಬಡ್ಡಿ, ಪ್ರತಿದಿನ ಬಡ್ಡಿ ಹಾಗೂ ಹೆಚ್ಚು ಹಣ ಹೂಡಿದವರಿಗೆ ಅಧಿಕ ಲಾಭದ ಭರವಸೆ ನೀಡಿ ವಂಚಕರು ಜನರನ್ನು ಸೆಳೆದಿದ್ದಾರೆ.

ಈ ಆಪ್‌ಗೆ ಹಣ ಹೂಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ನಂಬಿಸಿ, ಅನೇಕರು ತಮ್ಮ ಉಳಿತಾಯವನ್ನು ಕಳೆದುಕೊಂಡಿದ್ದಾರೆ. ಶಿವಮೊಗ್ಗ, ಬೆಂಗಳೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಜನ ಲಕ್ಷಾಂತರ ರೂಪಾಯಿ ಕಳೆದುಕೊಂಡು ಕೈ ಸುಟ್ಟುಕೊಂಡಿದ್ದಾರೆ. ರವಿ ಕುಮಾರ್, ವೆಂಕಟರಮಣಪ್ಪ, ರಾಮಾಚಾರಿ, ಕೃಷ್ಣಾಚಾರಿ, ಲಲಿತಾ, ವರದರಾಜ್ ಎಂಬ ಆರು ಮಂದಿ ಈ ಆಪ್ ಹಿಂದೆ ಇರುವ ಆರೋಪ ಇದ್ದು, ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾರ್ವಜನಿಕರು ಇಂತಹ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ್​ ಯರಗಣವಿ
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More