ಫೆಂಗಲ್ ಚಂಡಮಾರುತ ಎಫೆಕ್ಟ್: ಫ್ಲೈಓವರ್ ಮೇಲೆ ಕಾರುಗಳ ಪಾರ್ಕಿಂಗ್!
ಫೆಂಗಲ್ ಚಂಡಮಾರುತ ತಮಿಳುನಾಡಲ್ಲಿ ಅಬ್ಬರಿಸುತ್ತಿದೆ. ಚೆನ್ನೈಗೆ ಎಂಟ್ರಿಯಾಗುತ್ತಲೇ ಮರಣ ಮೃದಂಗ ಬಾರಿಸಿದೆ. ಇನ್ನು ಈ ಫೆಂಗಲ್ ಚಂಡಮಾರುತ ಅಬ್ಬರದಿಂದ ಬಚಾವ್ ಆಗಲು ಚೆನ್ನೈನ ಟಿ ನಗರದ ನಿವಾಸಿಗಳು ತಮ್ಮ ಕಾರುಗಳನ್ನು ಫ್ಲೈ ಓವರ್ ಗಳ ಮೇಲೆ ನಿಲ್ಲಿಸಿದ್ದಾರೆ.
ಚೆನ್ನೈ, (ಡಿಸೆಂಬರ್ 01): ಶ್ರೀಲಂಕಾದಲ್ಲಿ ಅವಾಂತರ ಸೃಷ್ಟಿಸಿದ ಫೆಂಗಲ್ ಚಂಡಮಾರುತ ಭಾರತಕ್ಕೆ ಎಂಟ್ರಿಕೊಟ್ಟಿದೆ. ನಿನ್ನೆ(ನವೆಂಬರ್ 3 ಸಂಜೆ 7.30ಕ್ಕೆ ತಮಿಳುನಾಡಿನ ಕರಾವಳಿಗೆ ಬಂದೆರಗಿದೆ. ಪುದುಚೇರಿ ಬಳಿಯ ತೀರಕ್ಕೆ ಪ್ರತಿಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿದೆ. ಇದ್ರಿಂದ ಬಿರುಗಾಳಿ ಸಹಿತ ಮಳೆ ಅಬ್ಬರಿಸುತ್ತಿದೆ. ತಮಿಳುನಾಡಿನ ಜತೆಗೆ ಪುದುಚೆರಿ, ಆಂಧ್ರ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಸೈಕ್ಲೋನ್ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಈ ಫೆಂಗಲ್ ಚಂಡಮಾರುತ ಅಬ್ಬರದಿಂದ ಬಚಾವ್ ಆಗಲು ಚೆನ್ನೈನ ಟಿ ನಗರದ ನಿವಾಸಿಗಳು ತಮ್ಮ ಕಾರುಗಳನ್ನು ಫ್ಲೈ ಓವರ್ ಗಳ ಮೇಲೆ ನಿಲ್ಲಿಸಿದ್ದಾರೆ. ಮಳೆ ನೀರು ನುಗ್ಗಿ ಕಾರುಗಳು ಹಾಳಾಗುತ್ತವೆ ಎಂದು ಜಿ ಎನ್ ಚೆಟ್ಟಿ ರೋಡ್ ಫ್ಲೈ ಓವರ್ ಮೇಲೆ ಪಾರ್ಕಿಂಗ್ ಮಾಡಿದ್ದಾರೆ.