ತಾಯಿ ಬದುಕಿದ್ದಾಗ ಸಾಕಲಿಲ್ಲ, ಈಗ ಮೃತದೇಹಕ್ಕಾಗಿ ಬಡಿದಾಡಿಕೊಂಡ ಮಕ್ಕಳು
ತಾಯಿ ಬದುಕಿದ್ದಾಗ ಮಕ್ಕಳು ಸರಿಯಾಗಿ ನೋಡೊಕೊಳ್ಳದೇ ಇದೀಗ ಆಕೆ ವೃದ್ಧಾಶ್ರಮದಲ್ಲಿ ಸಾವನ್ನಪ್ಪಿದ್ದು, ಇದೀಗ ತಾಯಿ ಶವಕ್ಕಾಗಿ ಮಕ್ಕಳು ಗಲಾಟೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮಾತೃಭೂಮಿ ವೃದ್ಧಾಶ್ರಮದಲ್ಲಿ ನಡೆದಿದೆ. ಆಲೂರು ತಾಲ್ಲೂಕಿನ ಕವಳಿಕೆರೆ ಗ್ರಾಮದ ಪಾರ್ವತಮ್ಮ (80) ಮೃತ ವೃದ್ಧೆ. ಮೃತ ತಾಯಿ ಪಾರ್ವತಮ್ಮ ಶವಕ್ಕಾಗಿ ಮಕ್ಕಳಾದ ಮಂಜೇಗೌಡ, ರಾಮಸ್ವಾಮಿ,ಜಯಮ್ಮ, ಭಾಗ್ಯ ಮತ್ತು ಇಂದ್ರ ಕಿತ್ತಾಡಿಕೊಂಡಿದ್ದಾರೆ.
ಹಾಸನ, (ನವೆಂಬರ್ 02): ಐವರು ಮಕ್ಕಳಿದ್ದರೂ ತಾಯಿಗೆ ತುತ್ತು ಅನ್ನ ಹಾಕದ ಪಾಪಿಗಳು ಇದೀಗ ಆಕೆ ಸತ್ತ ಬಳಿಕ ಮೃತದೇಹಕ್ಕಾಗಿ ಬಡಿದಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮಾತೃಭೂಮಿ ವೃದ್ಧಾಶ್ರಮದಲ್ಲಿ ನಡೆದಿದೆ. ತಾಯಿ ಬದುಕಿದ್ದಾಗ ಮಕ್ಕಳು ಸರಿಯಾಗಿ ನೋಡೊಕೊಳ್ಳದೇ ಇದೀಗ ಆಕೆ ವೃದ್ಧಾಶ್ರಮದಲ್ಲಿ ಸಾವನ್ನಪ್ಪಿದ್ದು, ಇದೀಗ ತಾಯಿ ಶವಕ್ಕಾಗಿ ಮಕ್ಕಳು ಗಲಾಟೆ ಮಾಡಿಕೊಂಡಿಕೊಂಡಿದ್ದಾರೆ.
ಆಲೂರು ತಾಲ್ಲೂಕಿನ ಕವಳಿಕೆರೆ ಗ್ರಾಮದ ಪಾರ್ವತಮ್ಮ (80) ಮೃತ ವೃದ್ಧೆ. ಮೃತ ತಾಯಿ ಪಾರ್ವತಮ್ಮ ಶವಕ್ಕಾಗಿ ಮಕ್ಕಳಾದ ಮಂಜೇಗೌಡ, ರಾಮಸ್ವಾಮಿ,ಜಯಮ್ಮ, ಭಾಗ್ಯ ಮತ್ತು ಇಂದ್ರ ಕಿತ್ತಾಡಿಕೊಂಡಿದ್ದಾರೆ. ಇದ್ದಾಗ ಸರಿಯಾಗಿ ನೋಡಿಕೊಳ್ಳದಿದ್ದರಿಂದ ಪಾರ್ವತಮ್ಮ ಮಕ್ಕಳಿಂದ ದೂರವಾಗಿ ಆಶ್ರಯಕ್ಕೆ ಸೇರಿದ್ದಳು. ಆದ್ರೆ, ಇದೀಗ ಪಾರ್ವತಮ್ಮ ಆಶ್ರಮದಲ್ಲಿ ಸಾವನ್ನಪ್ಪಿದ್ದು, ಆಕೆಯ ಮೃತದೇಹಕ್ಕಾಗಿ ಮಕ್ಕಳು ಪರಸ್ಪರು ಬಡಿದಾಡಿಕೊಂಡಿದ್ದಾರೆ. ಇದರಿಂದ ಮಾತೃಭೂಮಿ ವೃದ್ದಾಶ್ರಮದಲ್ಲಿ ಹೈಡ್ರಾಮವೇ ನಡೆಯಿತು.
