ಜಾಹ್ನವಿ ಮಾಡಿದ ಕುತಂತ್ರ ತಡವಾಗಿ ಅರ್ಥ ಮಾಡಿಕೊಂಡ ಅಶ್ವಿನಿ ಗೌಡ

Updated on: Oct 27, 2025 | 6:05 PM

ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಜೊತೆಯಾಗಿ ಸಮಯ ಕಳೆಯುತ್ತಿದ್ದರು. ಈಗ ಬಿಗ್ ಬಾಸ್ ಆಟದಲ್ಲಿ ಟ್ವಿಸ್ಟ್ ಎದುರಾಗಿದೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ನಡುವೆ ಬಿರುಕು ಉಂಟಾಗಿದೆ. ಜಾಹ್ನವಿ ಮಾಡಿದ್ದ ಕುತಂತ್ರಗಳು ಈಗ ಅಶ್ವಿನಿ ಗೌಡ ಅವರಿಗೆ ಅರ್ಥವಾಗಿದೆ.

ಆರಂಭದಿಂದಲೂ ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಜೊತೆ ಜೊತೆಯಾಗಿ ಕಾಲ ಕಳೆಯುತ್ತಿದ್ದರು. ಎಲ್ಲರ ಮೇಲೂ ಅವರು ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದ್ದರು. ಈಗ ಬಿಗ್ ಬಾಸ್ ಆಟದಲ್ಲಿ ಟ್ವಿಸ್ಟ್ ಎದುರಾಗಿದೆ. ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ನಡುವೆ ಬಿರುಕು ಮೂಡಿದೆ. ಅವರಿಬ್ಬರು ಜಗಳ ಮಾಡಿಕೊಂಡಿದ್ದಾರೆ. ಜಾಹ್ನವಿ ಮಾಡಿರುವ ಎಲ್ಲ ಕುತಂತ್ರಗಳು ಈಗ ಅಶ್ವಿನಿ ಗೌಡ (Ashwini Gowda) ಅವರಿಗೆ ಅರ್ಥ ಆಗಿದೆ. ಅದನ್ನು ರಾಶಿಕಾ ಶೆಟ್ಟಿ ಬಳಿ ಹೇಳಿಕೊಂಡು ಅಶ್ವಿನಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ಅಕ್ಟೋಬರ್ 27ರ ಸಂಚಿಕೆಯ ಪ್ರೋಮೋ ಇಲ್ಲಿದೆ. ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಹಾಟ್​ ಸ್ಟಾರ್’ ಮೂಲಕ ಎಪಿಸೋಡ್ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.