ರವಿ ವರ್ಮಾ-ಡ್ಯಾನಿ ವಿವಾದ; ಜೀವ ಬೆದರಿಕೆ ಬಗ್ಗೆ ಮಂಡಳಿ ಅಧ್ಯಕ್ಷರ ಪ್ರತಿಕ್ರಿಯೆ
‘ಜಾಕಿ’ ಸಿನಿಮಾದಲ್ಲಿನ ಸಾಹಸ ದೃಶ್ಯದ ಕ್ರೆಡಿಟ್ಗೆ ಸಂಬಂಧಿಸಿದಂತೆ ಡಿಫರೆಂಟ್ ಡ್ಯಾನಿ ಹಾಗೂ ರವಿ ವರ್ಮಾ ನಡುವೆ ವಿವಾದ ಆಗಿದೆ. ‘ಇಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ವರ್ಚಸ್ಸು ಇದೆ. ಇಬ್ಬರ ಪರವಾದ ವಾದವನ್ನೂ ನಾವು ಕೇಳಬೇಕು. ಇಬ್ಬರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳುವುದು ಉತ್ತಮ. ಇದು ಕನ್ನಡ ಚಿತ್ರರಂಗದ ಗೌರವದ ಪ್ರಶ್ನೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದ್ದಾರೆ.
ಸಾಹಸ ನಿರ್ದೇಶಕ ರವಿ ವರ್ಮಾ (Ravi Varma) ಅವರ ಮೇಲೆ ಕೆಲವು ಆರೋಪಗಳು ಕೇಳಿಬಂದಿವೆ. ಕನ್ನಡ ಚಿತ್ರರಂಗದ ಮತ್ತೋರ್ವ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ರವಿ ವರ್ಮಾ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡಿಫರೆಂಟ್ ಡ್ಯಾನಿ (Different Danny) ಅವರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಿನ್ನೆ ಡಿಫರೆಂಟ್ ಡ್ಯಾನಿ ಬಂದಿದ್ದರು. ತಮಗೆ ರಕ್ಷಣೆ ಬೇಕು ಎಂದರು. ರವಿ ವರ್ಮಾ ಕಡೆಯಿಂದ ಬೆದರಿಕೆ ಇದೆ ಅಂತ ಹೇಳಿದರು. ಇಂಥ ಸಂದರ್ಭಗಳಲ್ಲಿ ವಾಣಿಜ್ಯ ಮಂಡಳಿ ಯಾವಾಗಲೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾ ಬಂದಿದೆ. ಡ್ಯಾನಿ ನೀಡಿದ ದೂರಿನ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕು. ರವಿ ವರ್ಮಾ ಅವರ ವಾದವನ್ನೂ ನಾವು ಆಲಿಸಬೇಕು. ಪ್ರಾಣ ಬೆದರಿಕೆ ಇದೆ ಎಂದಾಗ ಜೀವ ಉಳಿಸುವ ಪ್ರಯತ್ನ ನಾವು ಮಾಡಬೇಕು. ಮುಂದೆ ಅನಾಹುತ ಆಗುವುದಕ್ಕೂ ಮುನ್ನ ರಕ್ಷಣೆ ನೀಡಲು ಕಾನೂನು ಇದೆ. ಹಾಗಾಗಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಬಹುದು’ ಎಂದು ಎನ್.ಎಂ. ಸುರೇಶ್ (NM Suresh) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.