ರವಿ ವರ್ಮಾ-ಡ್ಯಾನಿ ವಿವಾದ; ಜೀವ ಬೆದರಿಕೆ ಬಗ್ಗೆ ಮಂಡಳಿ ಅಧ್ಯಕ್ಷರ ಪ್ರತಿಕ್ರಿಯೆ

Updated on: Mar 13, 2024 | 10:19 PM

‘ಜಾಕಿ’ ಸಿನಿಮಾದಲ್ಲಿನ ಸಾಹಸ ದೃಶ್ಯದ ಕ್ರೆಡಿಟ್​ಗೆ ಸಂಬಂಧಿಸಿದಂತೆ ಡಿಫರೆಂಟ್​ ಡ್ಯಾನಿ ಹಾಗೂ ರವಿ ವರ್ಮಾ ನಡುವೆ ವಿವಾದ ಆಗಿದೆ. ‘ಇಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ವರ್ಚಸ್ಸು ಇದೆ. ಇಬ್ಬರ ಪರವಾದ ವಾದವನ್ನೂ ನಾವು ಕೇಳಬೇಕು. ಇಬ್ಬರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳುವುದು ಉತ್ತಮ. ಇದು ಕನ್ನಡ ಚಿತ್ರರಂಗದ ಗೌರವದ ಪ್ರಶ್ನೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ. ಸುರೇಶ್​ ಹೇಳಿದ್ದಾರೆ.

ಸಾಹಸ ನಿರ್ದೇಶಕ ರವಿ ವರ್ಮಾ (Ravi Varma) ಅವರ ಮೇಲೆ ಕೆಲವು ಆರೋಪಗಳು ಕೇಳಿಬಂದಿವೆ. ಕನ್ನಡ ಚಿತ್ರರಂಗದ ಮತ್ತೋರ್ವ ಸಾಹಸ ನಿರ್ದೇಶಕ ಡಿಫರೆಂಟ್​ ಡ್ಯಾನಿ ಅವರಿಗೆ ರವಿ ವರ್ಮಾ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡಿಫರೆಂಟ್​ ಡ್ಯಾನಿ (Different Danny) ಅವರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ. ಸುರೇಶ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಿನ್ನೆ ಡಿಫರೆಂಟ್ ಡ್ಯಾನಿ ಬಂದಿದ್ದರು. ತಮಗೆ ರಕ್ಷಣೆ ಬೇಕು ಎಂದರು. ರವಿ ವರ್ಮಾ ಕಡೆಯಿಂದ ಬೆದರಿಕೆ ಇದೆ ಅಂತ ಹೇಳಿದರು. ಇಂಥ ಸಂದರ್ಭಗಳಲ್ಲಿ ವಾಣಿಜ್ಯ ಮಂಡಳಿ ಯಾವಾಗಲೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾ ಬಂದಿದೆ. ಡ್ಯಾನಿ ನೀಡಿದ ದೂರಿನ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕು. ರವಿ ವರ್ಮಾ ಅವರ ವಾದವನ್ನೂ ನಾವು ಆಲಿಸಬೇಕು. ಪ್ರಾಣ ಬೆದರಿಕೆ ಇದೆ ಎಂದಾಗ ಜೀವ ಉಳಿಸುವ ಪ್ರಯತ್ನ ನಾವು ಮಾಡಬೇಕು. ಮುಂದೆ ಅನಾಹುತ ಆಗುವುದಕ್ಕೂ ಮುನ್ನ ರಕ್ಷಣೆ ನೀಡಲು ಕಾನೂನು ಇದೆ. ಹಾಗಾಗಿ ಅವರು ಪೊಲೀಸ್​ ಠಾಣೆ ಮೆಟ್ಟಿಲೇರಬಹುದು’ ಎಂದು ಎನ್​.ಎಂ. ಸುರೇಶ್​ (NM Suresh) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More