[lazy-load-videos-and-sticky-control id=”yc3R2Yy_Vj4″]ಮಂಡ್ಯ: ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಸಂಬಂಧಿಸಿ ಅನೇಕ ಎಡವಟ್ಟುಗಳನ್ನು ಸಿಬ್ಬಂದಿ ಮಾಡುತ್ತಾ ಬಂದಿದ್ದಾರೆ. ಇದೀಗ ಮತ್ತೊಂದು ಮಹಾ ಎಡವಟ್ಟು ನಡೆದಿದೆ. ಸೋಂಕಿನಿಂದ ಮೃತಪಟ್ಟವರ ದೇಹವನ್ನು ಸಬಂಧಿಕರಿಗೆ ನೀಡದೆ ಸಿಬ್ಬಂದಿಯೇ ಅಂತ್ಯ ಸಂಸ್ಕಾರ ಮಾಡಬೇಕು ಏಕೆಂದರೆ ಸೋಂಕು ಜನರಿಗೆ ಹರಡುತ್ತೆ ಅಂತಾ. ಆದರೆ ಇಲ್ಲಿ ಮನೆಗಳ ಬಳಿಯೇ ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ಮಾಡುತ್ತಿರುವಂತಹ ಘಟನೆ ಮಂಡ್ಯದ ಯತ್ತಗದಹಳ್ಳಿಯಲ್ಲಿ ನಡೆದಿದೆ.
ಹೀಗಾಗಿ ಮಂಡ್ಯ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸ್ ಕಾವಲಿನಲ್ಲಿ ಸ್ಲಮ್ ನಿವಾಸಿಗಳಿಗೆ ಆಶ್ರಯ ಕೊಟ್ಟಿರುವ ಮನೆಗಳ ಪಕ್ಕದಲ್ಲೇ ಕೊರೊನಾದಿಂದ ಮೃತಪಟ್ಟವನ ಅಂತ್ಯ ಸಂಸ್ಕಾರ ನಡೆದಿದೆ. ಆದರೆ ಮಹಾ ಎಡವಟ್ಟು ಅಂದ್ರೆ ಜಿಲ್ಲಾಡಳಿತ ನಿಗದಿಪಡಿಸಿದ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆದಿದೆ. ಆದರೆ ಜಿಲ್ಲಾಡಳಿತ ನಿಗದಿಪಡಿಸಿದ ಸ್ಥಳದಲ್ಲಿ ಮನೆಗಳಿವೆ. ಮನೆಗಳ ಬಳಿ ಸ್ಥಳ ನಿಗದಿ ಮಾಡಿದ್ದಕ್ಕೆ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 8:41 am, Wed, 8 July 20