DK Shivakumar: ದೆಹಲಿಯಲ್ಲಿ ಶಿವಕುಮಾರ್ ಕೊನೆಗೂ ಬಾಯ್ಬಿಟ್ಟಿದ್ದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಲು!

|

Updated on: May 17, 2023 | 5:43 PM

ಆದರೆ ಅವರ ಬಾಯಿಬಿಡಿಸಲು ಪತ್ರಕರ್ತರು ಭಗೀರಥ ಪ್ರಯತ್ನ ಮಾಡಬೇಕಾಯಿತು.

ದೆಹಲಿ: ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಗುದ್ದಾಟ ಜಾರಿಯಲ್ಲಿದೆ. ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬಾಯಿ ಬಿಡುತ್ತಿಲ್ಲ, ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಇಬ್ಬರದ್ದೂ ದಿವ್ಯ ಮೌನ, ಅಸಹನೆ ಇಲ್ಲವೇ ಮೈಕ್ ಗಳನ್ನು ದೂರತಳ್ಳುವ ದುರ್ವರ್ತನೆ. ಆದರೆ ಫಾರ್ ಎ ಚೇಂಜ್ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಜೊತೆ ಮಾತುಕತೆ ನಡೆಸಿ ಹೊರಬಂದ ನಂತರ ಮಾಧ್ಯಮದವರೆಡೆ ನಗೆ ಬೀರಿದಲ್ಲದೆ ಒಂದೆರಡು ಮಾತು ಕೂಡ ಅಡಿದರು. ಆದರೆ ಅವರ ಬಾಯಿಬಿಡಿಸಲು ಪತ್ರಕರ್ತರು ಭಗೀರಥ ಪ್ರಯತ್ನ ಮಾಡಬೇಕಾಯಿತು. ಶಿವಕುಮಾರ್ ಮಾತಾಡಿದ್ದು ಕೂಡ ಮಾಧ್ಯಮಗಳ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಲು ಮಾತ್ರ. ನೀವೆಲ್ಲ ಸತ್ಯ ಬರಿಯೋದನ್ನು ಬಿಟ್ಟುಬಿಟ್ಟಿದ್ದೀರಿ, ಬರೀ ಬೋಗಸ್ ವಿಷಯಗಳನ್ನು, ಫ್ರಾಡ್ ಗಳು ಹೇಳುವ ಸುಳ್ಳುಗಳನ್ನು ಬರೆಯುತ್ತೀರಿ, ಹಾಗಾಗೇ ನಿಮ್ಮೊಂದಿಗೆ ನಾನು ಮಾತಾಡಲ್ಲ ಎಂದು ಬೇಸರದಿಂದ ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ