Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು

ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು

ರಾಜೇಶ್ ದುಗ್ಗುಮನೆ
|

Updated on: Mar 24, 2025 | 8:45 AM

ವಿನಯ್ ಗೌಡ ಹಾಗೂ ರಜತ್ ಇಬ್ಬರೂ ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದವರು. ಒಬ್ಬರು 10ನೇ ಸೀಸನ್​ನಲ್ಲಿ ಸ್ಪರ್ಧಿ ಆಗಿದ್ದರೆ ಮತ್ತೊಬ್ಬರು 11ನೇ ಸೀಸನ್ ಸ್ಪರ್ಧಿ ಆಗಿದ್ದರು. ಈಗ ಇವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅದಕ್ಕೆ ಕಾರಣ ಆದ ವಿಚಾರ ಏನು? ಆ ಬಗ್ಗೆ ಇಲ್ಲಿದೆ ಮಾಹಿತಿ.

ವಿನಯ್ ಗೌಡ ಹಾಗೂ ರಜತ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಈಗ ಅದೇ ವಿಚಾರ ಸಂಕಷ್ಟ ತಂದಿದೆ. ಹೌದು, ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ (Vinay Gowda) ಹಾಗೂ ರಜತ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ‌ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ಹಾಕಲಾಗಿದೆ.  ಸಾರ್ವಜನಿಕ ಸ್ಥಳದಲಿ, ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರಿಲ್ಸ್ ಮಾಡಿದ್ದೇ ಇವರಿಗೆ ಸಮಸ್ಯೆ ತಂದಿದೆ. ರಜತ್ ಅವರು ಈ ವಿಡಿಯೋನ ಅಪ್​ಲೋಡ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.