ಕೋವಿಡ್ ಪ್ರಕರಣದಲ್ಲಿ ಮೊದಲ ಎಫ್​ಐಆರ್, ಸೇಡಿನ ರಾಜಕಾರಣವಲ್ಲದೆ ಮತ್ತೇನೂ ಅಲ್ಲ: ಜಗದೀಶ್ ಶೆಟ್ಟರ್

|

Updated on: Dec 14, 2024 | 12:19 PM

ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಬೆಳಕಿಗೆ ಬಂದ ಮೇಲೆ ಸರ್ಕಾರ ಕೋವಿಡ್ ಹಗರಣದ ಬಗ್ಗೆ ಮಾತಾಡುತ್ತಿದೆ, ಎಪ್​ಐಅರ್ ಗಳು ದಾಖಲಾಗುತ್ತಿವೆ, ಬಿಜೆಪಿ ಇಂಥಕ್ಕೆಲ್ಲ ಹೆದರಲ್ಲ ಮತ್ತು ಗಂಭೀರವಾಗಿ ಪರಿಗಣಿಸಲ್ಲ, ಎಫ್​ಅರ್​ಐಗಳನ್ನು ಎದುರಿಸಲು ಪಕ್ಷದ ನಾಯಕರು ಸಿದ್ಧವಾಗಿದ್ದಾರೆ ಎಂದು ಸಂಸದ್ ಜಗದೀಶ್ ಶೆಟ್ಟರ್​ ಹೇಳಿದರು.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಸಂಸದ ಜಗದೀಶ್ ಶೆಟ್ಟರ್ ಕೋವಿಡ್ ಪ್ರಕರಣದಲ್ಲಿ  ಮೊದಲ ಎಫ್​ಐಆರ್ ದಾಖಲಾಗಿರುವುದು ಸೇಡಿನ ರಾಜಕಾರಣವಲ್ಲದೆ ಮತ್ತೇನೂ ಅಲ್ಲ ಎಂದರು. ಪ್ರಕರಣದ ತನಿಖೆ ನಡೆಸುತ್ತಿರುವ ಜಸ್ಟೀಸ್ ಜಾನ್ ಮೈಕೆಲ್ ಡಿಕುನ್ನಾ ಆಯೋಗ ಕೇವಲ ಮಧ್ಯಂತರ ವರದಿಯನ್ನು ಮಾತ್ರ ಸಲ್ಲಿಸಿದೆ, ಅದರ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿರುವುದು ತರ್ಕಕ್ಕೆ ನಿಲುಕದ ಅಂಶ, ರಾಜ್ಯ ಸರ್ಕಾರವು ಮುಡಾ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಮೊದಲಾದವುಗಳನ್ನು ಜನರಿಂದ ಮರೆಮಾಚಲು ಸರ್ಕಾರ ಇದೆನ್ನೆಲ್ಲ ಮಾಡುತ್ತಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ. ಸಿಎನ್​ ಮಂಜುನಾಥ್