ಜಾಮೀನು ಪಡೆದು ಹೊರಬಂದವರೇ ನನ್ನ ಮಗನನ್ನು ಹೊರಗೆ ಕರೆತರುತ್ತಾರೆ: ನಂದೀಶ್ ತಾಯಿ

ಜಾಮೀನು ಪಡೆದು ಹೊರಬಂದವರೇ ನನ್ನ ಮಗನನ್ನು ಹೊರಗೆ ಕರೆತರುತ್ತಾರೆ: ನಂದೀಶ್ ತಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 14, 2024 | 1:10 PM

ಸುಮಾರು ಒಂದು ತಿಂಗಳು ಹಿಂದೆ ನಂದೀಶ್ ತಂದೆ ತಾಯಿ ಜೈಲಿಗೆ ಹೋಗಿ ನಂದೀಶ್​​ನನ್ನು ಮಾತಾಡಿಸಿಕೊಂಡು ಬಂದಿದ್ದರಂತೆ. ಜೈಲಿನಿಂದ ಹೊರಬಂದವರು ಮಗನನ್ನು ಮನಗೆ ಕರೆತರುತ್ತಾರೆ ಎಂದು ತಾಯಿ ಹೇಳುತ್ತಾರೆ. 45 ದಿನಗಳಿಂದ ಜೈಲಿನಿಂದ ಹೊರಗಿರುವ ನಟ ದರ್ಶನ್​ ರನ್ನು ಭೇಟಿಯಾಗುವ ಪ್ರಯತ್ನ ಅವರು ಮಾಡಿಲ್ಲ, ಅರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ನಟನಿಗೂ ಇವರನ್ನು ಭೇಟಿಯಾಗುವ ಪುರುಸೊತ್ತಿಲ್ಲ.

ಮಂಡ್ಯ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 5 ಆಗಿರುವ ನಂದೀಶ್ ಒಬ್ಬರನ್ನು ಹೊರತುಪಡಿಸಿ ಎಲ್ಲರಿಗೂ ಜಾಮೀನು ಸಿಕ್ಕಿದೆ. ನಂದೀಶ್ ತಂದೆ ತಾಯಿ ದಿನಗೂಲಿ ಮಾಡಿಕೊಂಡು ಬದುಕುವ ಜನ, ಅವರು ವಕೀಲನನ್ನು ಹೈರ್ ಮಾಡಲಾರರು. ಮಾಧ್ಯಮದವರು ಸಂಪರ್ಕಿಸಿದಾಗ, ಈಗ ಹೊರಬಂದವರ ಮೇಲೆ ತಮಗೆ ನಮಗೆ ನಂಬಿಕೆಯಿದೆ, ಅವರೇ ಮಗನನ್ನು ಹೊರಗೆ ಕರೆತರುತ್ತಾರೆ ಎಂದು ನಂದೀಶ್ ತಾಯಿ ಹೇಳುತ್ತಾರೆ. ಮಗಳು ಮತ್ತು ಅಳಿಯ ವಿಷಯ ನೋಡಿಕೊಳ್ಳುತ್ತಿದ್ದಾರೆ, ಮಗ ಹೊರಗೆ ಬಂದೇ ಬರುತ್ತಾನೆ ಎಂದು ಆಕೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿ ನಂ.7 ಅನುಕುಮಾರ್​ನ ತಾಯಿ ಜಯಮ್ಮ ಪಟ್ಟ ಕಷ್ಟ ಸಾಮಾನ್ಯವಲ್ಲ