Loading video

ಜೈ ಭೀಮ್ ಎಂದು ಮಾತು ಅರಂಭಿಸಿದ ಜಮೀರ್ ಅಹ್ಮದ್ ನಾನು ಮೊದಲು ಹಿಂದುಸ್ತಾನಿ, ನಂತರ ಕನ್ನಡಿಗ ಅಮೇಲೆ ಒಬ್ಬ ಮುಸಲ್ಮಾನ ಎಂದರು!

|

Updated on: May 04, 2024 | 5:36 PM

ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹುಟ್ಟಿರದಿದ್ದರೆ, ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲ ಮತ್ತು ತಾನು ಹೀಗೆ ನಿಮ್ಮ ಮುಂದೆ ಬಂದು ಮಾತಾಡುವುದು ಸಾಧ್ಯವಿರಲಿಲ್ಲ ಎಂದು ಹೇಳುವ ಅವರು, ನಮಗೆ ಈ ಸ್ಥಾನಮಾನ ಕೊಡಿಸಿದ ಅಂಬೇಡ್ಕರ್ ಅವರನ್ನು ನೆನೆಯುವುದು ಅತ್ಯಂತ ಅವಶ್ಯಕವಾಗಿದೆ ಎನ್ನುತ್ತಾರೆ.

ಬಾಗಲಕೋಟೆ: ನಗರದಲ್ಲಿಂದು ಆಯೋಜಿಸಲಾಗಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ (minorities convention) ಭಾಗಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ (Samyukta Patil) ಪರ ಮತ ಯಾಚಿಸಿದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ತಮ್ಮ ಭಾಷಣದಲ್ಲಿ ಹೊಸ ವೈಖರಿಯನ್ನು ಅನುಸರಿಸಿದರು. ಇದು ಅಲ್ಪಸಂಖ್ಯಾತರ ಸಮಾವೇಶವಾದ ಕಾರಣ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರಲ್ಲಿ ಹಲವರಿಗೆ ಮಂತ್ರಿ ಜೊತೆ ವೇದಿಕೆ ಮೇಲೆ ಕಾಣಿಸಿಕೊಳ್ಳುವ ಆಸೆ. ಹಾಗಾಗಿ ಜಮೀರ್ ಭಾಷಣ ಮಾಡುತ್ತಿದ್ದ ಪೋಡಿಯಂ ಬಳಿ ಜನಜಂಗುಳಿ! ಅಸ್ಸಾಲಂ ವಾಲೇಕುಂ ಅಂತ ಭಾಷಣ ಆರಂಭಿಸುವ ಸಚಿವ ಜೈ ಭೀಮ್ ಅನ್ನುತ್ತಾರೆ! ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹುಟ್ಟಿರದಿದ್ದರೆ, ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲ ಮತ್ತು ತಾನು ಹೀಗೆ ನಿಮ್ಮ ಮುಂದೆ ಬಂದು ಮಾತಾಡುವುದು ಸಾಧ್ಯವಿರಲಿಲ್ಲ ಎಂದು ಹೇಳುವ ಅವರು, ನಮಗೆ ಈ ಸ್ಥಾನಮಾನ ಕೊಡಿಸಿದ ಅಂಬೇಡ್ಕರ್ ಅವರನ್ನು ನೆನೆಯುವುದು ಅತ್ಯಂತ ಅವಶ್ಯಕವಾಗಿದೆ ಎನ್ನುತ್ತಾರೆ. ಸಮಾವೇಶದಲ್ಲಿ ಅಲ್ಪಸಂಖ್ಯಾತರೇ ಜಾಸ್ತಿ ಸಂಖ್ಯೆಯಲ್ಲಿರುವುದರಿಂದ ತಾನು ಉರ್ದುನಲ್ಲಿ ಮಾತಾಡುತ್ತೇನೆಂದು ಜಮೀರ್ ಅಹ್ಮದ್ ಹೇಳಿ; ಯಾರೂ ತಪ್ಪು ಕಲ್ಪಿಸಿಕೊಳ್ಳಬಾರದು, ಎಲ್ಲಕ್ಕೂ ಮೊದಲು ನಾನು ಹಿಂದೂಸ್ತಾನಿ, ನಂತರ ಕನ್ನಡಿಗ ಅಮೇಲೆ ಮುಸಲ್ಮಾನ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಪತಿಗಿಂತ ಸಂಯುಕ್ತ ಪಾಟೀಲ್ ಶ್ರೀಮಂತೆ

Published on: May 04, 2024 05:35 PM