ತಲೆಗೂದಲಿಂದ ಟಂಟಂ ವಾಹನ ಎಳೆದ 75 ರ ವಯೋವೃದ್ಧ; ವಿಡಿಯೋ ವೈರಲ್
ವಿಜಯಪುರ ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಶೇಗುಣಸಿ ಗ್ರಾಮದೇವತೆ ದ್ಯಾಮವ್ವ ಜಾತ್ರೆಯಲ್ಲಿ 75 ವರ್ಷದ ವಯೋವೃದ್ಧ ಮಡಿವಾಳಯ್ಯ ಹಿರೇಮಠ ಎಂಬುವವರು ಸಾಹಸ ಮೆರೆದಿದ್ದಾರೆ. ತಲೆಗೂದಲಿಂದ ಟಂಟಂ ವಾಹನವನ್ನು ಎಳೆದು ಸಾಹಸ ಪ್ರದರ್ಶನ ಮಾಡಿದ್ದಾರೆ. ವೃದ್ಧನ ಸಾಹಸ ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ವಿಜಯಪುರ, ಮೇ.04: ವಿಜಯಪುರ ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಶೇಗುಣಸಿ ಗ್ರಾಮದೇವತೆ ದ್ಯಾಮವ್ವ ಜಾತ್ರೆಯಲ್ಲಿ 75 ವರ್ಷದ ವಯೋವೃದ್ಧ ಮಡಿವಾಳಯ್ಯ ಹಿರೇಮಠ ಎಂಬುವವರು ಸಾಹಸ ಮೆರೆದಿದ್ದಾರೆ. ತಲೆಗೂದಲಿಂದ ಟಂಟಂ ವಾಹನವನ್ನು ಎಳೆದು ಸಾಹಸ ಪ್ರದರ್ಶನ ಮಾಡಿದ್ದಾರೆ. ವೃದ್ಧನ ಸಾಹಸ ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಟಂಟಂ ವಾಹನ ಮುಂಭಾಗದಲ್ಲಿ ಹಗ್ಗವನ್ನು ಕಟ್ಟಿ, ಅದನ್ನು ತಲೆಗೂದಲಿಗೆ ಕಟ್ಟಿಕೊಂಡು ಎಳೆದಿದ್ದಾರೆ. ಈ ಟಂಟಂ ವಾಹನ ಅಂದಾಜು 1ಟನ್ಗೂ ಅಧಿಕ ಭಾರವಿದ್ದು, ಜೊತೆಗೆ ಮೂರು ಜೋಳದ ಮೂಟೆ, ಹಲವು ಜನರನ್ನು ಕೂರಿಸಿ ಟಂಟಂ ವಾಹನ ಎಳೆದಿದ್ದಾರೆ. ಇನ್ನು ಅಷ್ಟೊಂದು ಭಾರವಿರುವ ಟಂಟಂ ಅನ್ನು ಬರೊಬ್ಬರಿ 250 ಮೀಟರ್ ಎಳೆದು ಗಮನ ಸೆಳೆದರು. ಇನ್ನು ಮಡಿವಾಳಯ್ಯ ಈ ರೀತಿ ಸಾಹಸ ಪ್ರದರ್ಶನ ಮಾಡುವ ಹವ್ಯಾಸ ಇರುವ ವ್ಯಕ್ತಿಯಂತೆ. ಅದರಂತೆ ತಮ್ಮೂರಿನ ಗ್ರಾಮದೇವತೆ ಜಾತ್ರೆಯಲ್ಲಿ ಈ ಸಾಹಸ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos