ಕಾರ್ಯಕರ್ತರನ್ನು ಗದರಿದ ಶಿವಕುಮಾರ್ ನಂತರ ತಮ್ಮ ಆತ್ಮೀಯ ಸ್ನೇಹಿತ ಸಿಎಸ್ ಶಿವಳ್ಳಿಯನ್ನು ನೆನೆದರು!
ಅವರ ಹಿಂದೆ ವೇದಿಕೆ ಮೇಲೆ ಕೂತಿದ್ದ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಕೀ ಜೈ ಅಂತ ಕೂಗುತ್ತಾರೆ. ಹಾಗೆ ನೋಡಿದರೆ ಅವರ ಘೋಷಣೆ ಶಿವಕುಮಾರ್ ಗೆ ಕಿರಿಕಿರಿಯೇನೂ ಉಂಟು ಮಾಡಲ್ಲ, ಮುಖಭಾವ ನೋಡಿದರೆ ಒಳಗೊಳಗೆ ಖುಷಿ ಅನುಭವಿಸಿರುತ್ತಾರೆ! ಹಾಗಾಗಿ, ನಯವಾಗಿಯೇ, ಏಯ್ ಸುಮ್ನೆ ಕೂತ್ಕೊಳ್ರಯ್ಯ, ನಿಮ್ಮನ್ನು ಸ್ಟೇಜ್ ಮೇಲೆ ಕೂರಿಸಿದ್ದೇ ತಪ್ಪಾಯ್ತು ಅನ್ನುತ್ತಾರೆ.
ಧಾರವಾಡ: ಜಿಲ್ಲೆಯ ಕುಂದಗೋಳಗೆ ಹೆಲಿಕಾಪ್ಟರ್ ನಲ್ಲಿ ಬಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ (Vinod Asooti) ಪರ ಮತಯಾಚನೆ ಮಾಡಿದರು. ಭಾಷಣದ ಅರಂಭದಲ್ಲೇ ವೇದಿಕೆ ಮೇಲೆ ಕೂತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನವಿರಾಗಿ ಪ್ರೀತಿಯಿಂದ ಗದರಿದ ಪ್ರಸಂಗ ನಡೆಯಿತು. ಶಿವಕುಮಾರ್ ಹಿರಿಯ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಉಲ್ಲೇಖಿಸಿ ಜೈ ಅನ್ನುತ್ತಾ ಕೊನೆಯಲ್ಲಿ ಸಿದ್ದರಾಮಯ್ಯ (Siddaramaiah) ಕೀ ಜೈ ಅನ್ನುತ್ತಾರೆ. ಅಗ ಅವರ ಹಿಂದೆ ವೇದಿಕೆ ಮೇಲೆ ಕೂತಿದ್ದ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಕೀ ಜೈ ಅಂತ ಕೂಗುತ್ತಾರೆ. ಹಾಗೆ ನೋಡಿದರೆ ಅವರ ಘೋಷಣೆ ಶಿವಕುಮಾರ್ ಗೆ ಕಿರಿಕಿರಿಯೇನೂ ಉಂಟು ಮಾಡಲ್ಲ, ಮುಖಭಾವ ನೋಡಿದರೆ ಒಳಗೊಳಗೆ ಖುಷಿ ಅನುಭವಿಸಿರುತ್ತಾರೆ! ಹಾಗಾಗಿ, ನಯವಾಗಿಯೇ, ಏಯ್ ಸುಮ್ನೆ ಕೂತ್ಕೊಳ್ರಯ್ಯ, ನಿಮ್ಮನ್ನು ಸ್ಟೇಜ್ ಮೇಲೆ ಕೂರಿಸಿದ್ದೇ ತಪ್ಪಾಯ್ತು ಅನ್ನುತ್ತಾರೆ. ತಮ್ಮ ಭಾಷಣದಲ್ಲಿ ಶಿವಕುಮಾರ್ ಈ ಭಾಗದ ಜನಪ್ರಿಯ ಕಾಂಗ್ರೆಸ್ ನಾಯಕ ಶಿವಳ್ಳಿ ಸಿಎಸ್ ಶಿವಳ್ಳಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು, ಅವರು ಬದುಕಿದ್ದರೆ ತನ್ನೊಂದಿಗೆ ಮಿನಿಸ್ಟ್ರಾಗಿರುತ್ತಿದ್ದರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬ್ರದರ್ ಕುಮಾರಸ್ವಾಮಿಗೆ ಎಲ್ಲವೂ ಗೊತ್ತು, ಕೇಂದ್ರದಿಂದ ಮಾಹಿತಿ ಪಡೆದಿರ್ತಾರೆ ಎಂದ ಡಿಕೆ ಶಿವಕುಮಾರ್