ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಪತಿಗಿಂತ ಸಂಯುಕ್ತ ಪಾಟೀಲ್ ಶ್ರೀಮಂತೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ್​ ಅವರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಇಂದು(ಏಪ್ರಿಲ್ 15) ಬೆಳಗ್ಗೆ ಬನಶಂಕರಿ ದೇವರ ದರ್ಶನ ಪಡೆದು ಬಳಿಕ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇನ್ನು ಸಂಯುಕ್ತ ಪಾಟೀಲ್ ಅವರು ಅಫಿಡೆವಿಟ್​ನಲ್ಲಿ ತಮ್ಮ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದು, ಪತಿಗಿಂತ ಶ್ರೀಮಂತರಾಗಿದ್ದಾರೆ. ಹಾಗಾದ್ರೆ ಸಂಯುಕ್ತ ಪಾಟೀಲ್ ಬಳಿ ಎಷ್ಟು ಆಸ್ತಿ ಇದೆ. ಅವರ ಪತಿ ಎಷ್ಟು ಆಸ್ತಿ ಹೊಂದಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಪತಿಗಿಂತ ಸಂಯುಕ್ತ ಪಾಟೀಲ್ ಶ್ರೀಮಂತೆ
ನಾಮಪತ್ರ ಸಲ್ಲಿಸಿದ ಸಂಯುಕ್ತ ಪಾಟೀಲ್
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ

Updated on:Apr 15, 2024 | 3:39 PM

ಬಾಗಲಕೋಟೆ, (ಏಪ್ರಿಲ್ 15): ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ(bagalkot Loksabha Congress Candidate ) ಸಂಯುಕ್ತಾ ಪಾಟೀಲ್ (Samyukta Patil) ನಾಮಪತ್ರ ಸಲ್ಲಿಕೆ ಮಾಡಿದರು. ಇಂದು(ಏಪ್ರಿಲ್ 15) ಬೆಳಗ್ಗೆ ಬನಶಂಕರಿ ದೇವರ ದರ್ಶನ ಪಡೆದು ಹೆಗಲಿಗೆ ಕಂಬಳಿ ಹಾಕಿಕೊಂಡು ಹೋಗಿ ನಾಮಪತ್ರ ಸಲ್ಲಿಸಿದರು. ಇನ್ನು ಸಂಯುಕ್ತ ಪಾಟೀಲ್ ಅವರು ತಮ್ಮ ನಾಮಪತ್ರದಲ್ಲಿ ಆಸ್ತಿ ವಿವರ ಸಲ್ಲಿಸಿದ್ದು, ಅವರ ಪತಿಗಿಂತ ಅವರೇ ಶ್ರೀಮಂತರಾಗಿರುವುದು ವಿಶೇಷ. ಸಂಯುಕ್ತಾ ಪಾಟೀಲ್ ಚರಾಸ್ಥಿ ಒಟ್ಟು 93,66,574.74 ರೂ ಮೌಲ್ಯದಾಗಿದ್ದು, ಸ್ಥಿರಾಸ್ತಿ 1,12,77,550 ರೂ. ಇದೆ. ಇದರೊಂದಿಗೆ ಸಂಯುಕ್ತ ಪಾಟೀಲ್​ ಅವರ ಒಟ್ಟು ಆಸ್ತಿ ಮೌಲ್ಯ 2 ಕೋಟಿ 6 ಲಕ್ಷದ 44 ಸಾವಿರದ 124 ರೂ. ಇದೆ ಎಂದು ಅಫಿಡೆವಿಟ್​ನಲ್ಲಿ ಘೋಷಿಸಿಕೊಂಡಿದ್ದಾರೆ.

ಇನ್ನು ಸಂಯುಕ್ತ ಪಾಟೀಲ್ ಅವರ ಪತಿ ಶಿವಕುಮಾರ್ ಅವರ ಬಳಿ ಸ್ಥಿರಾಸ್ತಿ ಇಲ್ಲ. 1 ಕೋಟಿ 4 ಲಕ್ಷ 33 ಸಾವಿರ ರೂ. ಮೌಲ್ಯದ ಚರಾಸ್ತಿ ಮಾತ್ರ ಹೊಂದಿದ್ದಾರೆ. ಹಾಗೇ ಸಂಯುಕ್ತ ಪಾಟೀಲ್ ಮತ್ತು ಶಿವಕುಮಾರ್ ವಿವಿಧ ಬ್ಯಾಂಕ್​ಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ಸಂಯುಕ್ತಾ ಪಾಟೀಲ್ ಹೆಸರಲ್ಲಿ 3 ಲಕ್ಷ 95 ಸಾವಿರ ಸಾಲ ಇದ್ದರೆ, ಪತಿ ಶಿವಕುಮಾರ್ ಶಿವಕುಮಾರ್ ಅವರು 59 ಲಕ್ಷದ 95 ಸಾವಿರದ 185 ರೂ ಸಾಲ ಹೊಂದಿದ್ದಾರೆ. ಇದರಲ್ಲಿ ಶಿವಕುಮಾರ್ ಅವರ ಶೈಕ್ಷಣಿಕ ಸಾಲ- 8 ಲಕ್ಷದ 95 ಸಾವಿರದ 180 ರೂ. ಇದೆ.

ಇದನ್ನೂ ಓದಿ: ಮಗಳು ಸಂಯುಕ್ತ ​ಪರ ತಂದೆ, ಮಗ ಬಿಜೆಪಿಯ ಆಕ್ಟೀವ್​ ಕಾರ್ಯಕರ್ತ! ಬಾಗಲಕೋಟೆಯಲ್ಲಿ ತಂದೆ-ಮಕ್ಕಳ ಜುಗಲಬಂದಿ

ಪತಿಗಿಂತ ಸಂಯುಕ್ತಾ ಪಾಟೀಲ್ ಶ್ರೀಮಂತೆ

ಸಂಯುಕ್ತಾ ಪಾಟೀಲ್ ಅವರ ಬಳಿ 500ಗ್ರಾಂ ಅಂದರೆ ಅರ್ಧ ಕೆಜಿ ಚಿನ್ನ ಮತ್ತು 5 ಕೆಜಿ ಬೆಳ್ಳಿ ಇದ್ದರೆ, ಪತಿ ಶಿವಕುಮಾರ್ ಅವರು 510 ಗ್ರಾಂ ಚಿನ್ನ ಹೊಂದಿದ್ದಾರೆ. ಇಷ್ಟೇ ಅಲ್ಲದೇ ಸಂಯುಕ್ತ ಪಾಟೀಲ್ ಸುಮಾರು 47 ಎಕರೆ ಭೂ ಒಡತಿಯಾಗಿದ್ದಾರೆ.

ಸಂಯುಕ್ತಾ ಪಾಟೀಲ್ 2 ಲಕ್ಷ 39 ಸಾವಿರ ನಗದು ಹಣ ಇದೆ. ಇನ್ನು ವಿವಿಧ ಬ್ಯಾಂಕ್‌‌ ಖಾತೆಯಲ್ಲಿ 57 ಲಕ್ಷದ 27 ಸಾವಿರದ 573 ರೂ. ಇದೆ. ಇನ್ನು ಪತಿ ಶಿವಕುಮಾರ್ ಕೈಯಲ್ಲಿ 1 ಲಕ್ಷದ 72 ಸಾವಿರ ರೂ.ನಗದು ಹಣ ಇದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 42 ಲಕ್ಷದ 49 ಸಾವಿರದ 270 ರೂ. ಇದೆ ಎಂದು ಅಫಿಡೆವಿಟ್​ನಲ್ಲಿ ಮಾಹಿತಿ ನೀಡಿದ್ದಾರೆ.

ಪತಿ ಶಿವಕುಮಾರ್ ಕಡೆಯಿಂದ 3 ಲಕ್ಷ 95 ಸಾವಿರ ಸಾಲ‌ ಪಡೆದುಕೊಂಡಿರುವ ಸಂಯುಕ್ತಾ ಪಾಟೀಲ್, ಬಳಿ ಯಾವುದೇ ವಾಹನಗಳಿಲ್ಲ. ಅಲ್ಲದೇ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:18 pm, Mon, 15 April 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ