ಸಿನಿಮಾಗಳ ಫೇಕ್​ ಪ್ರಚಾರ​: ‘ಫಸ್ಟ್​ ನೈಟ್​ ವಿತ್​ ದೆವ್ವ’ ಸುದ್ದಿಗೋಷ್ಠಿಯಲ್ಲಿ ಪ್ರಥಮ್​ ಗರಂ

Updated on: Feb 27, 2024 | 12:36 PM

‘ಅಣ್ಣಾವ್ರು, ವಿಷ್ಣುವರ್ಧನ್​, ಅಂಬರೀಷ್​ ಅವರು ಕಟ್ಟಿದ ಚಿತ್ರರಂಗ ಇದೆ. ಅವರು ಇದ್ದಾಗ ಯಾವುದೇ ಫೇಕ್​ ಪ್ರಚಾರ ಇರಲಿಲ್ಲ. ಆದರೆ ಈಗ ಫೇಕ್​ ಪ್ರಮೋಷನ್​ ಹಾವಳಿ ಶುರುವಾಗಿದೆ. ಕೆಲವರು ಚಿತ್ರರಂಗವನ್ನು ಹಾಳು ಮಾಡುತ್ತಿದ್ದಾರೆ’ ಎಂದು ನಟ ಪ್ರಥಮ್​ ಹೇಳಿದ್ದಾರೆ. ‘ಫಸ್ಟ್​ ನೈಟ್​ ವಿತ್​ ದೆವ್ವ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಫೇಕ್​​ ಪ್ರಮೋಷನ್​ ಕುರಿತು ಮಾತನಾಡಿದ್ದಾರೆ.

ನಟ, ನಿರ್ದೇಶಕ, ಬಿಗ್​ ಬಾಸ್​ ಖ್ಯಾತಿಯ ಪ್ರಥಮ್​ ಅವರು ‘ಫಸ್ಟ್​ ನೈಟ್​ ವಿತ್​ ದೆವ್ವ’ (First Night With Devva) ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಟೀಸರ್​ನ ಆರಂಭದಲ್ಲೇ ಫೇಕ್​ ಪ್ರಮೋಷನ್​ ಬಗ್ಗೆ ಚಿತ್ರತಂಡದವರು ಸೂಚನೆ ನೀಡಿದ್ದಾರೆ. ‘ಯಾವುದೇ ಸುಳ್ಳು ಪ್ರಚಾರದ ಮೂಲಕ ನಾವು ಜನರನ್ನು ಯಾಮಾರಿಸುವ ಕೆಲಸ ಮಾಡಲ್ಲ. ಕನ್ನಡ ಚಿತ್ರರಂಗವನ್ನು ಫೇಕ್​ ರಾಕ್ಷಸರಿಂದ ಕಾಪಾಡಿ’ ಎಂದು ಸಂದೇಶವನ್ನು ಬಿತ್ತರಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಥಮ್​ (Pratham) ಮಾತನಾಡಿದ್ದಾರೆ. ‘ಮೊದಲೆಲ್ಲ 1 ದಿನಕ್ಕೆ 1 ಲಕ್ಷ ವೀವ್ಸ್​ ಅಂತ ಹಾಕಲಾಗುತ್ತಿತ್ತು. ಈಗ ಒಂದು ಗಂಟೆಗೆ 10 ಲಕ್ಷ ವೀವ್ಸ್​ ಅಂತ ಹಾಕುತ್ತಿದ್ದಾರೆ. ಕೆಲವರು ಅರ್ಧ ಗಂಟೆಗೆ 5 ಮಿಲಿಯನ್​ ಅಂತ ಹಾಕಿಕೊಳ್ತಾರೆ. ಇಂಥ ಫೇಕ್​ ರಾಕ್ಷಸರಿಂದ ಚಿತ್ರರಂಗವನ್ನು ಕಾಪಾಡಬೇಕು. ಇತ್ತೀಚೆಗೆ ಪೇಯ್ಡ್​ ಪ್ರಮೋಷನ್​, ಫೇಕ್​ ಪ್ರಮೋಷನ್​ ಆಗುತ್ತಿದೆ’ ಎಂದು ಪ್ರಥಮ್​ ಹೇಳಿದ್ದಾರೆ. ಈ ಸಿನಿಮಾಗೆ ಪಿವಿಆರ್​ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ನವೀನ್ ಬೀರಪ್ಪ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಥಮ್​ ಜೊತೆ ನಿಖಿತಾ, ಜೀವಿತಾ, ಸುಷ್ಮಿತಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More