ಕತ್ತರಿಸಿದರೂ ಸಾಯದೆ ಚಡಪಡಿಸುತ್ತಿರುವ ಮೀನು! ಮಲ್ಪೆ ಬಂದರಿನಲ್ಲಿ ಅಚ್ಚರಿ ಮೂಡಿಸಿದ ವಿಚಿತ್ರ ಘಟನೆ

Edited By:

Updated on: Jan 27, 2026 | 2:54 PM

ಉಡುಪಿಯ ಮಲ್ಪೆ ಬಂದರಿನಲ್ಲಿ ಅಚ್ಚರಿಯ, ವಿಲಕ್ಷಣ ಘಟನೆಯೊಂದು ನಡೆದಿದೆ. ಗ್ರಾಹಕರಿಗೆ ನೀಡಲೆಂದು ತುಂಡು ಮಾಡಿದ ಮೀನು ಮತ್ತೂ ಜೀವಂತವಾಗಿದ್ದು, ತುಂಬಾ ಹೊತ್ತು ಚಡಪಡಿಸಿದೆ. ಮೀನು ಇಷ್ಟೊಂದು ಹೊತ್ತು ಜೀವಂತವಾಗಿರುವುದು ಹೇಗೆ ಎಂಬ ಪ್ರಶ್ನೆ ಈಗ ಹಲವರಲ್ಲಿ ಮೂಡಿದ್ದು, ಈ ಘಟನೆ ಮಲ್ಪೆ ಬಂದರಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ವೈರಲ್ ವಿಡಿಯೋ ಇಲ್ಲಿದೆ.

ಉಡುಪಿ, ಜನವರಿ 27: ಗ್ರಾಹಕರಿಗೆ ನೀಡಲೆಂದು ಕತ್ತರಿಸಿದ ಬಂಗುಡೆ ಮೀನೊಂದು ಸಾಯದೆ ಮತ್ತೂ ಚಡಪಡಿಸಿದ ಅಚ್ಚರಿಯ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದ್ದು, ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಮಲ್ಪೆ ಬಂದರಿನಲ್ಲಿ ಮೀನು ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರು, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಮೀನನ್ನು ಅಲ್ಲಿಯೇ ಕತ್ತರಿಸಿ ಕೊಡುವಂತೆ ಕೇಳಿಕೊಂಡಾಗ, ಮಹಿಳೆ ಮೀನನ್ನು ಕತ್ತರಿಸಿ ಟಬ್‌ಗೆ ಹಾಕಿದ್ದಾರೆ. ಆದರೆ, ಕತ್ತರಿಸಿದ ಬಳಿಕವೂ ಮೀನು ಜೀವಂತವಾಗಿ ಚಡಪಡಿಸುತ್ತಿರುವುದು ಗಮನಕ್ಕೆ ಬಂದಿದೆ.

ಈ ವಿಚಿತ್ರ ದೃಶ್ಯವನ್ನು ಕಂಡು ಅಲ್ಲಿದ್ದ ಇತರ ಮೀನು ಮಾರಾಟಗಾರರು ಹಾಗೂ ಗ್ರಾಹಕರು ಹೌಹಾರಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಕತ್ತರಿಸಿದ ಬಳಿಕವೂ ಜೀವಂತವಾಗಿರುವ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ