ಕೆಪಿಸಿಸಿ ಐಟಿ ಸೆಲ್ ಉಪಾಧ್ಯಕ್ಷೆ ಸೌಗಂಧಿಕಾ ಕುರಿತು ಚಕ್ರವರ್ತಿ ಸೂಲಿಬೆಲೆ ಅವಹೇಳಕಾರಿ ಪೋಸ್ಟ್, ಚಿಂತಕನ ವಿರುದ್ಧ ಎಫ್ಐಅರ್!
ಸೌಗಂಧಿಕಾ, ದೇವಸ್ಥಾನಗಳಿಗೆ ಹೋಗಿ ದೇವರಿಗಳಿಗೆ ವಂದಿಸಿದರೆ ಸಾಕು ಸೆಲ್ಫೀ ಯಾಕೆ? ಅಂತ ಪ್ರಶ್ನಿಸಿದ್ದರಂತೆ. ಅದಕ್ಕುತ್ತರವಾಗಿ ಸೂಲಿಬೆಲೆ, ಅವರು ಸೆಲ್ಫೀ ಹಾಕಿದರೆ ನಿನಗ್ಯಾಕೆ ಹೊಟ್ಟೆಯುರಿ ಅಂತ ಪೋಸ್ಟ್ ಮಾಡಿದ ಬಳಿಕ ಸೌಗಂಧಿಕಾ ಇತರ ಮಹಿಳಾ ಕಾರ್ಯಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಕಂಪ್ಮೇಂಟ್ ಸಲ್ಲಿಸಿದ್ದಾರೆ.
ಶಿವಮೊಗ್ಗ: ಚಿಂತಕ ಮತ್ತು ಯುವ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಐಟಿ ಸೆಲ್ (KPCC IT cell) ಉಪಾಧ್ಯಕ್ಷೆ ಸೌಗಂಧಿಕಾ (Sougandhika) ನಗರದ ವಿನೋಬಾ ನಗರ ಪೋಲೀಸ್ ಠಾಣೆಯಲ್ಲಿ ಸೂಲಿಬೆಲೆ ವಿರುದ್ಧ ದೂರೊಂದನ್ನು ಸಲ್ಲಿಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ವಿರುದ್ಧ ಸಾಮಾಜಿಕ ಜಾಲತಾಣ ಪೇಸ್ ಬುಕ್ ನಲ್ಲಿ ಸೂಲಿಬೆಲೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಗ್ಗೆ ಸೌಗಂಧಿಕಾ ದೂರು ಸಲ್ಲಿಸಿದ್ದಾರೆ. ಸೌಗಂಧಿಕಾ ಹೇಳುವ ಪ್ರಕಾರ, ಭಾರತದ ಚಂದ್ರಯಾನ-3 ಸಫಲವಾದ ಹಿನ್ನೆಲೆಯಲ್ಲಿ ಹಿಂದೂಗಳು ದೇವಸ್ಥಾನಕ್ಕೆ ಹೋಗಿ ದೇವ-ದೇವತೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಒಂದು ಸೆಲ್ಫೀ ತೆಗೆದುಕೊಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಂತ ಸೂಲಿಬೆಲೆ ಪೋಸ್ಟೊಂದರ ಮೂಲಕ ಹೇಳಿದ್ದರಂತೆ. ಅದಕ್ಕೆ ಸೌಗಂಧಿಕಾ, ದೇವಸ್ಥಾನಗಳಿಗೆ ಹೋಗಿ ದೇವರಿಗಳಿಗೆ ವಂದಿಸಿದರೆ ಸಾಕು ಸೆಲ್ಫೀ ಯಾಕೆ? ಅಂತ ಪ್ರಶ್ನಿಸಿದ್ದರಂತೆ. ಅದಕ್ಕುತ್ತರವಾಗಿ ಸೂಲಿಬೆಲೆ, ಅವರು ಸೆಲ್ಫೀ ಹಾಕಿದರೆ ನಿನಗ್ಯಾಕೆ ಹೊಟ್ಟೆಯುರಿ ಅಂತ ಪೋಸ್ಟ್ ಮಾಡಿದ ಬಳಿಕ ಸೌಗಂಧಿಕಾ ಇತರ ಮಹಿಳಾ ಕಾರ್ಯಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಕಂಪ್ಮೇಂಟ್ ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ