ವಿಮಾನದಲ್ಲಿ ಮದ್ಯ ಸೇವಿಸಿ ಫ್ಲೈಟ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರೆ ಹೀಗೆಯೇ ಆಗೋದು!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 07, 2021 | 9:58 PM

ಆದರೆ ಮದ್ಯದ ಅಮಲಿನಲ್ಲಿ ಅವರು ಮಾಡಬಾರದ್ದನ್ನೆಲ್ಲ ಮಾಡಿದ್ದಾನೆ. ಗಗನ ಸಖಿಯರಿಗೆ ಚುಡಾಯಿಸಿದ್ದಾನೆ, ಕಿಚಾಯಿಸಿದ್ದಾನೆ, ಅವರ ಎದೆ ಭಾಗವನ್ನು ಮುಟ್ಟಿದ್ದಾನೆ. ಮೊದಲಿಗೆ, ಸುಮ್ಮನೆ ಕೂತ್ಕೋ ಅಂತ ವಿಮಾನದ ಇತರ ಸಿಬ್ಬಂದಿ ಅವನನ್ನು ನಯವಾಗೇ ಎಚ್ಚರಿಸಿದ್ದಾರೆ.

ವಿಮಾನಗಳಲ್ಲಿ ಪ್ರಯಾಣಿಸುವಾಗ ಮದ್ಯದ ಅಮಲಿನಲ್ಲಿ ಸಹ ಪ್ರಯಾಣಿಕರಿಗೆ ತೊಂದರೆ ಮಾಡುವ ಜನ ಅಮೇರಿಕದಲ್ಲೂ ಇದ್ದಾರೆ ಮಾರಾಯ್ರೇ. ಮೊನ್ನೆ ಅಂದರೆ ಒಂದು ವಾರದ ಹಿಂದೆ ಏನಾಯ್ತು ಅಂತ ಗೊತ್ತುಂಟಾ? 22 ವರ್ಷ ವಯಸ್ಸಿನ ಯುವಕ, ಅವನ ಹೆಸರು ಮ್ಯಾಕ್ಸ್ವೆಲ್ ಬೆರ್ರಿ ಅಂತೆ, ಫಿಲೆಡೆಲ್ಫಿಯಾದಿಂದ ಮಿಯಾಮಿಗೆ ಹೋಗುವ ಫ್ರಂಟಿಯರ್ ಏರ್ಲೈನ್ಸ್ ವಿಮಾನದಲ್ಲಿ ಕಂಠಪೂರ್ತಿ ಕುಡಿದಿದ್ದಾನೆ. ಓಕೆ, ಕುಡಿದವನು ಬಾಯಿ ಮುಚ್ಚಿಕೊಂಡು ಕೂತಿದ್ದರೆ ಚೆನ್ನಿತ್ತು.

ಆದರೆ ಮದ್ಯದ ಅಮಲಿನಲ್ಲಿ ಅವರು ಮಾಡಬಾರದ್ದನ್ನೆಲ್ಲ ಮಾಡಿದ್ದಾನೆ. ಗಗನ ಸಖಿಯರಿಗೆ ಚುಡಾಯಿಸಿದ್ದಾನೆ, ಕಿಚಾಯಿಸಿದ್ದಾನೆ, ಅವರ ಎದೆ ಭಾಗವನ್ನು ಮುಟ್ಟಿದ್ದಾನೆ. ಮೊದಲಿಗೆ, ಸುಮ್ಮನೆ ಕೂತ್ಕೋ ಅಂತ ವಿಮಾನದ ಇತರ ಸಿಬ್ಬಂದಿ ಅವನನ್ನು ನಯವಾಗೇ ಎಚ್ಚರಿಸಿದ್ದಾರೆ. ಅದರೆ, ಮದ್ಯದ ಅಮಲಿನ ಬಿಸಿರಕ್ತ ಹೇಗೆ ಸುಮ್ಮನಿದ್ದೀತು? ಮ್ಯಾಕ್ಸ್ವೆಲ್ ಸಹ ಪ್ರಯಾಣಿಕರನ್ನು ಮನಬಂದಂತೆ ಬಯ್ಯಲಾರಂಭಿಸಿದ್ದಾನೆ. ಜೋರು ಧ್ವನಿಯಲ್ಲಿ ಕಿರುಚಿದ್ದಾನೆ.

ಆಗ ತಾಳ್ಮೆ ಕಳೆದುಕೊಂಡ ವಿಮಾನದ ಸಿಬ್ಬಂದಿ ಏನು ಮಾಡಿದರು ಅಂತ ನೋಡಿ. ಡಕ್ಟ್ ಟೇಪ್ನಿಂದ ಅವನನ್ನು ಸ್ಥಳ ಬಿಟ್ಟು ಕದಲದಂತೆ ಕಟ್ಟಿಹಾಕಿದ್ದಾರೆ ಮತ್ತು ಬಾಯಿ ಮುಚ್ಚಿಸಲು ಅವನ ಮುಖಕ್ಕೂ ಟೇಪ್ ಬಿಗಿದಿದ್ದಾರೆ! ಆದರೂ ಅವನು ಕೂಗಾಡುವುದನ್ನು ನಿಲ್ಲಿಸಿಲ್ಲ. ಕೊನೆಗೆ ಸಿಬ್ಬಂದಿ ವರ್ಗದವರು ಏರ್ ಕಂಟ್ರೋಲ್ ರೂಮನ್ನು ಸಂಪರ್ಕಿಸಿ ಮಿಯಾಮಿ ವಿಮಾನ ನಿಲ್ದಾಣದಲ್ಲಿ ಪೋಲಿಸರಿಗೆ ತಯಾರಿರಲು ಹೇಳಿದ್ದಾರೆ. ಮಿಯಾಮಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪೊಲೀಸರು ಅವನನ್ನು ಎತ್ಹಾಕಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಅಮೆರಿಕದ ಜಿಮ್ನಾಸ್ಟ್ ಆಲಿ ರೈಸ್ಮಾನ್​ರಂತೆ ನಟಿಸಿದ ಪುಟ್ಟ ಬಾಲಕಿ! ವಿಡಿಯೋ ಮಜವಾಗಿದೆ ಮಿಸ್ ಮಾಡ್ಕೊಳ್ಬೇಡಿ

Published on: Aug 07, 2021 09:57 PM