ನೀರು ನುಗ್ಗಿ ಸಂಪೂರ್ಣವಾಗಿ ಮುಳುಗಿದ ಗೋಕಾಕ್ ನಗರ: ಇಲ್ಲಿದೆ ನೋಡಿ ಡ್ರೋಣ್ ವಿಡಿಯೋ
ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ವರುಣಾರ್ಭಟಕ್ಕೆ ಅವಾಂತರಗಳ ಸುರಿಮಳೆ ಆಗ್ತಿದೆ. ಬೆಳಗಾವಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಸೇರಿದಂತೆ ನಾನಾ ಕಡೆಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಗೋಕಾಕ್ ನಗರ ಪ್ರವಾಹದಲ್ಲಿ ಮುಳುಗಿ ಹೋಗಿದೆ. ಗೋಕಾಕ್ ನಗರ ನಗರದ ನಾಲ್ಕೈದು ಕಾಲೋನಿಗಳು ನೀರಲ್ಲಿ ಮುಳುಗಿರುವ ದೃಶ್ಯ ಡ್ರೋಣ್ ನಲ್ಲಿ ಸೆರೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಗಾವಿ, (ಆಗಸ್ಟ್ 20): ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ವರುಣಾರ್ಭಟಕ್ಕೆ ಅವಾಂತರಗಳ ಸುರಿಮಳೆ ಆಗ್ತಿದೆ. ಬೆಳಗಾವಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಸೇರಿದಂತೆ ನಾನಾ ಕಡೆಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಮತ್ತೊಂದೆಡೆ ಘಟ್ಟಪ್ರಭಾ ನದಿ ಹುಕ್ಕಿ ಹರಿಯುತ್ತಿದೆ. ಇದರಿಂದ ಗೋಕಾಕ್ ನಗರ ಪ್ರವಾಹದಲ್ಲಿ ಮುಳುಗಿ ಹೋಗಿದೆ. ಗೋಕಾಕ್ ನಗರ ನಗರದ ನಾಲ್ಕೈದು ಕಾಲೋನಿಗಳು ನೀರಲ್ಲಿ ಮುಳುಗಿರುವ ದೃಶ್ಯ ಡ್ರೋಣ್ ನಲ್ಲಿ ಸೆರೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
