AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿದ್ದುಪಡಿ ಮಸೂದೆಯ ಪೇಪರ್ ಹರಿದು ಅಮಿತ್ ಶಾ ಮೇಲೆಸೆದ ವಿರೋಧ ಪಕ್ಷಗಳ ಸಂಸದರು

ತಿದ್ದುಪಡಿ ಮಸೂದೆಯ ಪೇಪರ್ ಹರಿದು ಅಮಿತ್ ಶಾ ಮೇಲೆಸೆದ ವಿರೋಧ ಪಕ್ಷಗಳ ಸಂಸದರು

ಸುಷ್ಮಾ ಚಕ್ರೆ
|

Updated on: Aug 20, 2025 | 4:04 PM

Share

ಲೋಕಸಭೆಯಲ್ಲಿ ಅಮಿತ್ ಶಾ ಬಳಿ ವಿರೋಧ ಪಕ್ಷದ ಸಂಸದರು ಸಂವಿಧಾನ ತಿದ್ದುಪಡಿ ಮಸೂದೆ 2025ರ ಪ್ರತಿಗಳನ್ನು ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ 2025 ಅನ್ನು ಮಂಡಿಸಿದ ನಂತರ ಕೆಲವು ವಿರೋಧ ಪಕ್ಷದ ಸದಸ್ಯರು ಅಮಿತ್ ಶಾ ಅವರ ಕಡೆಗೆ ಅದರ ಪ್ರತಿಗಳನ್ನು ಹರಿದು ಎಸೆದಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದರೆ ಮತ್ತು 30 ದಿನಗಳಿಗಿಂತ ಹೆಚ್ಚು ಜೈಲು ಶಿಕ್ಷೆ ಅನುಭವಿಸಿದ್ದರೆ ಅವರನ್ನು ಪದಚ್ಯುತಗೊಳಿಸುವ ನಿಬಂಧನೆಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಹೊಸ ಮಸೂದೆಯನ್ನು ಮಂಡಿಸಿದ್ದಾರೆ. ಇದರಿಂದ ಲೋಕಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು. ಲೋಕಸಭೆಯಲ್ಲಿ ಸಂವಿಧಾನ (ತಿದ್ದುಪಡಿ) ಮಸೂದೆ 2025ರ ಮೇಲಿನ ಚರ್ಚೆಯ ಸಮಯದಲ್ಲಿ ಜೋರಾಗಿ ಘೋಷಣೆಗಳನ್ನು ಕೂಗಿದ ಕೆಲವು ವಿರೋಧ ಪಕ್ಷದ ಸಂಸದರು ಮಂಡನೆಯಾದ ಮಸೂದೆಯ ಪ್ರತಿಗಳನ್ನು ಹರಿದು ಗೃಹ ಸಚಿವ ಅಮಿತ್ ಶಾ ಅವರ ಕಡೆಗೆ ಎಸೆದರು. ಕೆಲವು ವಿರೋಧ ಪಕ್ಷದ ಸದಸ್ಯರ ಅಶಿಸ್ತಿನ ವರ್ತನೆಯಿಂದಾಗಿ ಲೋಕಸಭೆ ಕಲಾಪವನ್ನು ಸಂಜೆ 5 ಗಂಟೆಗೆ ಮುಂದೂಡಲಾಯಿತು.

ಕ್ರಿಮಿನಲ್ ಕೇಸ್​​ನಲ್ಲಿ ಪ್ರಧಾನಿಗಳು, ಕೇಂದ್ರ ಸಚಿವರು, ಸಿಎಂಗಳು, ರಾಜ್ಯಗಳ ಸಚಿವರು ಬಂಧನಕ್ಕೆ ಒಳಗಾದರೆ ಅವರನ್ನು ಆ ಹುದ್ದೆಯಿಂದ ವಜಾ ಮಾಡುವ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಂಡಿಸಿದ್ದಾರೆ. ಗಂಭೀರ ಕ್ರಿಮಿನಲ್​ ಆರೋಪದ ಮೇಲೆ ಬಂಧನಕ್ಕೆ ಒಳಗಾದರೆ ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ಹುದ್ದೆಯಿಂದ ವಜಾಗೊಳಿಸುವ ಮಸೂದೆ ಮಂಡನೆಯಾಗಿದೆ. ಆದರೆ, ಪ್ರಧಾನಿ, ಸಿಎಂಗಳ ವಿರುದ್ಧದ ಆರೋಪಗಳಿಗೆ ವಜಾ ನಿಯಮ ಅನ್ವಯವಾಗುವುದಿಲ್ಲ. ಈಗಿನ ಕಾನೂನಿನಲ್ಲಿ ಪಿಎಂ, ಕೇಂದ್ರ ಸಚಿವರ ವಜಾಕ್ಕೆ ಅವಕಾಶವಿಲ್ಲ. ಹೊಸ ಮಸೂದೆಯಿಂದ ಪಿಎಂ, ಸಿಎಂ, ಸಚಿವರ ವಜಾಕ್ಕೆ ಅವಕಾಶವಿರಲಿದೆ. ಅವರು 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದರೆ ಹುದ್ದೆಯಿಂದ ವಜಾಗೊಳಿಸಲಾಗುವುದು. ಯಾವುದೇ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಗಳ ಸಚಿವರನ್ನು ವಶಕ್ಕೆ ಪಡೆದರೆ ಅಥವಾ ಬಂಧನಕ್ಕೆ ಒಳಗಾದರೆ ಅವರನ್ನು 30 ದಿನದೊಳಗೆ ಹುದ್ದೆಯಿಂದ ವಜಾಗೊಳಿಸಲು ಅವಕಾಶವಿದೆ. ಅಥವಾ ಅವರು 30 ದಿನದೊಳಗೆ ರಾಜೀನಾಮೆ ನೀಡುವುದು ಕಡ್ಡಾಯವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ