ನ್ಯೂ ಯಾರ್ಕ್ ಎದುರಿಸುತ್ತಿರುವ ಪ್ರವಾಹದಂಥ ಸ್ಥಿತಿಯಲ್ಲಿ ಆಸ್ಪತ್ರೆ ಹೊಕ್ಕ ನೀರು ಕೊವಿಡ್ ರೋಗಿಯನ್ನು ಬೆಡ್ ಸಮೇತ ಬೀದಿಗೆಳೆದಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 02, 2021 | 5:25 PM

ಬುಧವಾರ ರಾತ್ರಿ ನ್ಯೂ ಯಾರ್ಕ್ ಸೆಂಟ್ರಲ್ ಪಾರ್ಕ್ ಪ್ರದೇಶದಲ್ಲಿ 3.1 ಇಂಚು ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ. ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಫ್ಲ್ಯಾಶ್ ಫ್ಲಡ್ ತುರ್ತುಸ್ಥಿತಿ ಘೋಷಿಸಲಾಗಿದೆ.

ನ್ಯೂ ಯಾರ್ಕ್, ನ್ಯೂ ಜೆರ್ಸಿ ಮೊದಲಾದ ಕಡೆ ನಾವು ಯೋಚಿಸಲೂ ಸಾಧ್ಯವಿರದಷ್ಟು ಜೋರಾಗಿ ಮಳೆಯಾಗುತ್ತಿದೆ. ಅಲ್ಲಿನ ಹವಾಮಾನ ಇಲಾಖೆ ಇಡಾ ಚಂಡಮಾರುತ ದುರ್ಬಲಗೊಂಡಿದೆ ಎಂದು ಹೇಳಿದೆಯಾದರೂ ಅದರ ಅಳಿದುಳಿದ ರಭಸ ಅಮೇರಿಕದ ಪ್ರಮುಖ ನಗರಗಳ ಮೇಲೆ ಈ ಮಟ್ಟದ ಪರಿಣಾಮ ಬೀರುತ್ತಿದೆಯೆಂದರೆ, ಅದು ಪ್ರಬಲವಾಗಿ ತನ್ನ ಪೂರ್ಣ ಜೋರಿನಲ್ಲಿ ಅಪ್ಪಳಿಸಿದ್ದರೆ ಗತಿಯೇನಾಗಿರುತಿತ್ತು? ಈ ಚಂಡಮಾರುತವು ಬ್ರಾಂಕ್ಸ್ ಭಾಗದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ ಮತ್ತು ಮೂಲಗಳ ಪ್ರಕಾರ ಕ್ವೀನ್ಸ್ನಲ್ಲಿ ನಡೆಯುತ್ತಿರುವ ಯು ಎಸ್ ಓಪನ್ ಟೆನಿಸ್ ಟೂರ್ನಿಯ ಕೆಲ ಪಂದ್ಯಗಳನ್ನು ವಿಳಂಬಗೊಳ್ಳುವಂತೆ ಮಾಡಿದೆ.

ನ್ಯೂ ಯಾರ್ಕ್​ನಲ್ಲಿ  ಸುರಿದ ಮಳೆಯ ಪ್ರಮಾಣ ಹೇಗಿತ್ತೆಂದರೆ ರಸ್ತೆಗೆ ಹರಿದು ಬಂದ ಅಪಾರ ಪ್ರಮಾಣದ ನೀರು ನಗರದ ಆಸ್ಪತ್ರೆ ಒಂದರೊಳಗೆ ನುಗ್ಗಿ ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯಬ್ಬನನ್ನು ಆತ ಮಲಗಿದ್ದ ಬೆಡ್ ಸಮೇತ ಹೊರಗೆಳೆದುಕೊಂಡು ಬಂದಿದೆ. ಆತ ಆಕ್ಸಿಜನ್ ಗಾಗಿ ಪರದಾಡುತ್ತಿರುವುದು ಈ ವಿಡಿಯೋನಲ್ಲಿ ನಿಮಗೆ ಕಾಣುತ್ತದೆ.

ಬುಧವಾರ ರಾತ್ರಿ ನ್ಯೂ ಯಾರ್ಕ್ ಸೆಂಟ್ರಲ್ ಪಾರ್ಕ್ ಪ್ರದೇಶದಲ್ಲಿ 3.1 ಇಂಚು ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ. ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಫ್ಲ್ಯಾಶ್ ಫ್ಲಡ್ ತುರ್ತುಸ್ಥಿತಿ ಘೋಷಿಸಲಾಗಿದೆ. ಭಾರಿ ಮಳೆ ಸೃಷ್ಟಿಸಿದ ಪ್ರವಾಹದಿಂದಾಗಿ ಕನಿಷ್ಠ 8 ಜನ ಸತ್ತಿದ್ದಾರೆ ಮತ್ತು ಇಬ್ಬರು ಕಾಣೆಯಾಗಿದ್ದಾರೆಂದು ವರದಿಯಾಗಿದೆ.

ನೆವಾರ್ಕ್ ಲಿಬರ್ಟಿ ಅಂತರರಾಷ್ಟ್ರೀಯ ವಿಮಾನ ನಿಲ್ದಾನ ಮತ್ತು ಅದರ ಸುತ್ತಮುತ್ತ 3.24 ಇಂಚ್ಗಳಷ್ಟು ಮಳೆಯಾಗಿದೆ ಮತ್ತು ಪ್ರವಾಹದಂಥ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿರುವ ವಿಡಿಯೋಗಳಲ್ಲಿ ನೀರು ವಿಮಾನ ನಿಲ್ದಾಣದೊಳಗೆ ಹರಿದು ಹೋಗುತ್ತಿರುವುದು ಕಾಣುತ್ತಿದೆ.

ಇದನ್ನೂ ಓದಿ:  Hurricane Ida: ಅಮೆರಿಕದ ಲೂಸಿಯಾನದಲ್ಲಿ ಇಡಾ ಚಂಡಮಾರುತದ ಅಬ್ಬರ; ಸದ್ಯದ ಪರಿಸ್ಥಿತಿಯ ವಿಡಿಯೋ ವೈರಲ್