Monsoon Rain: ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ; ಅಪಾಯದಲ್ಲಿದ್ದ ಕುಟುಂಬಗಳ ರಕ್ಷಣೆ

Edited By:

Updated on: Jul 06, 2023 | 10:16 AM

ಕರಾವಳಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು(ಜು.6) ಕೂಡ ರಜೆ ಮುಂದುವರೆಸಲಾಗಿದೆ. ಬಹುತೇಕ ಎಲ್ಲಾ ಪ್ರದೇಶಗಳು ನೀರಿನಿಂದ ಜಲಾವೃತವಾಗಿ, ಹಲವು ಮನೆಗಳು ದ್ವೀಪದಂತಾಗಿದೆ.

ಉಡುಪಿ: ಕರಾವಳಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಉಡುಪಿ(Udupi) ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು(ಜು.6) ಕೂಡ ರಜೆ ಮುಂದುವರೆಸಲಾಗಿದೆ. ಬಹುತೇಕ ಎಲ್ಲಾ ಪ್ರದೇಶಗಳು ನೀರಿನಿಂದ ಜಲಾವೃತವಾಗಿ, ಹಲವು ಮನೆಗಳು ದ್ವೀಪದಂತಾಗಿದೆ. ಈ ಹಿನ್ನಲೆ ಜನರಿಗೆ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚಿಸಿದೆ. ಇನ್ನು ರಾತ್ರೋ ರಾತ್ರಿ ಇಂದ್ರಾಣಿ ನದಿ ಉಕ್ಕಿ ಹರಿದಿದ್ದು, ಕಾಲುವೆಗಳು ನದಿಯ ರೂಪ ಪಡೆದುಕೊಂಡಿದೆ. ಜೊತೆಗೆ ನಗರ ಸಭಾ ವ್ಯಾಪ್ತಿಯ ಕೊಡಂಕೂರು ಭಾಗದಲ್ಲಿ ಅಪಾಯದಲ್ಲಿದ್ದ ಹಲವು ಕುಟುಂಬಗಳನ್ನ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ