ಅವತ್ತು ಗಾಂಧಿ ನಗರದಲ್ಲಿ ಅವಮಾನ, ಇಂದು ಕಟೌಟ್: ಇಳಿ ವಯಸ್ಸಿನಲ್ಲಿ ಕಟೌಟ್ ಕಂಡ ನಟ ಬಿರಾದರ್ ಖುಷಿಗೆ ಪಾರವಿಲ್ಲ

ಅವತ್ತು ಗಾಂಧಿ ನಗರದಲ್ಲಿ ಅವಮಾನ, ಇಂದು ಕಟೌಟ್: ಇಳಿ ವಯಸ್ಸಿನಲ್ಲಿ ಕಟೌಟ್ ಕಂಡ ನಟ ಬಿರಾದರ್ ಖುಷಿಗೆ ಪಾರವಿಲ್ಲ

ಮಂಜುನಾಥ ಸಿ.
|

Updated on: Jul 06, 2023 | 8:25 AM

Vaijanath Biradar: ನಟನಾಗಲು ಗಾಂಧಿ ನಗರಕ್ಕೆ ಬಂದಾಗ ಇಲ್ಲಿ ತುಸು ಅಪಮಾನಗಳಿದ್ದವು ಆದರೆ ಇಂದು ಅದೇ ಗಾಂಧಿ ನಗರದಲ್ಲಿ ನನ್ನ ಕಟೌಟ್ ನೋಡಿ ಖುಷಿ ಆಗುತ್ತಿದೆ ಎಂದಿದ್ದಾರೆ ಬಿರಾದರ.

”ನಾನು ಬೀದರ್​ನಿಂದ ನಟನಾಗಲು ಗಾಂಧಿ ನಗರಕ್ಕೆ (Gandhi Nagar) ಬಂದಾಗ ಇಲ್ಲಿ ತುಸು ಅವಮಾನಗಳಾಗಿದ್ದವು. ನಟರನ್ನು ನೋಡಲು ಹೋದಾಗ ಹೋಗೆಂದು ದೂರ ಕಳಿಸುತ್ತಿದ್ದರು. ಆದರೆ ಇಂದ ಇದೇ ಗಾಂಧಿನಗರದಲ್ಲಿ ನನ್ನ ಕಟೌಟ್ ಬಿದ್ದಿದೆ. ಸಿನಿಮಾದಲ್ಲಿ ನನಗೆ ಮುಖ್ಯ ಪಾತ್ರ ಕೊಟ್ಟಿದ್ದಲ್ಲದೆ 40 ಅಡಿ ಕಟೌಟ್ ಅನ್ನು ಹಾಕಿಸಿದ್ದಾರೆ. ನನಗೆ ಬಹಳ ಖುಷಿಯಾಗಿದೆ. ಇದರಿಂದ ಇನ್ನಷ್ಟು ಹುಮ್ಮಸ್ಸು ಬಂದಿದೆ ಇನ್ನಷ್ಟು ಸಿನಿಮಾಗಳಲ್ಲಿ ಸಿನಿಮಾಗಳಲ್ಲಿ ನಟಿಸುವ ಉತ್ಸಾಹ ಬಂದಿದೆ” ಎಂದಿದ್ದಾರೆ ಹಿರಿಯ ನಟ ವೈಜನಾಥ್ ಬಿರಾದರ (Vaijanath Biradar).

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ