ದೇಶ ಮತ್ತು ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು ಸಚಿವೆ ಬಜೆಟ್ ಮಂಡಿಸಿದ್ದಾರೆ: ಆರ್ ಅಶೋಕ

|

Updated on: Feb 01, 2024 | 3:15 PM

ದೇಶದಲ್ಲಿರುವ ಬಡವರ ಮತ್ತು ಮಧ್ಯಮ ವರ್ಗದವರ ಏಳ್ಗೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ನಲ್ಲಿ ಕೆಲ ಹೊಸ ಘೋಷನೆಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಲ್ಲಿನ ಕೆಲ ಅಂಶಗಳನ್ನು ಅಶೋಕ ಉಲ್ಲೇಖಿಸಿ ಶ್ಲಾಘಿಸಿದರು.

ಬೆಂಗಳೂರು: ಚುನಾವಣೆ ಹತ್ತಿರದಲ್ಲಿದ್ದರೂ ವೋಟುಗಳಿಗಾಗಿ ಯಾವುದೇ ಗ್ಯಾರಂಟಿಯನ್ನು ನೀಡದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಂಸತ್ತಿನಲ್ಲಿ ಇಂದು ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ (R Ashoka) ಹೇಳಿದರು. ದೇಶವನ್ನು ಮುಖ್ಯವಾಗಿಟ್ಟುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ (all-round development) ಮಂಡಿಸಿರುವ ಬಜೆಟ್ ಎಂದು ಅಶೋಕ ಬಣ್ಣಿಸಿದರು. ದೇಶದಲ್ಲಿರುವ ಬಡವರ ಮತ್ತು ಮಧ್ಯಮ ವರ್ಗದವರ ಏಳ್ಗೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ನಲ್ಲಿ ಕೆಲ ಹೊಸ ಘೋಷನೆಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಲ್ಲಿನ ಕೆಲ ಅಂಶಗಳನ್ನು ಅಶೋಕ ಉಲ್ಲೇಖಿಸಿ ಶ್ಲಾಘಿಸಿದರು. ವಾರ್ಷಿಕ ರೂ. 7 ಲಕ್ಷದ ವರೆಗೆ ಆದಾಯ ಇರರುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಕೋಟ್ಯಾಂತರ ಮಧ್ಯಮ ಕುಟುಂಬಗಳಿಗೆ ಪ್ರಯೋಜನವಾಗಲಿದೆ, ಸ್ವಸಹಾಯ ಯೋಜನೆ ಅಡಿ ಸುಮಾರು 9 ಕೋಟಿ ಮಹಿಳೆಯರಿಗೆ ಲಾಭಾರ್ಥಿಗಳಾಗಿಸುವುದು, ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುವ ಮಹಿಳೆಯರಿಗೆ ಉಚಿತ ಲಸಿಕೆ, ಲಕ್ಷಾಂತರ ಆಶಾ ಕಾರ್ಯಕರ್ತೆಯರಿಗೆ ಉಚಿತ ಆಯುಷ್ಮಾನ್ ವಿಮೆ ಮತ್ತು ಒಂದು ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಮನೆ ಮೊದಲಾದ ಘೋಷಣೆಗಳನ್ನು ವಿರೋಧ ಪಕ್ಷದ ನಾಯಕ ಅರ್ ಅಶೋಕ ಕೊಂಡಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on