ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ದೆಹಲಿ ಕೆಂಪುಕೋಟೆಯ ಸುತ್ತ ಪೊಲೀಸ್ ಭದ್ರತೆಯ ಕೋಟೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2021 | 8:31 PM

ಕೆಂಪುಕೋಟೆಯ ಸುತ್ತ ಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯ ಟ್ರಾಫಿಕ್ ವಿಭಾಗ ಆಗಸ್ಟ್ 15 ರ ಸಂಚಾರ ವ್ವವಸ್ಥೆ ಬಗ್ಗೆ ಒಂದು ನೀಲಿನಕ್ಷೆಯನ್ನು ಬಿಡುಗಡೆ ಮಾಡಿದೆ.

ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆ ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ರವಿವಾರದಂದು ಆಚರಿಸಲಿದೆ. ರಾಜಧಾನಿ ದೆಹಲಿ ಕೆಂಪುಕೋಟೆ ಈ ಸಂಭ್ರಮಕ್ಕಾಗಿ ಸಕಲ ರೀತಿಯಲ್ಲಿ ಸನ್ನದ್ಧಗೊಳ್ಳುತ್ತಿದ್ದು ಅಂತಿಮ ಹಂತದ ತಯಾರಿಗಳು ಜಾರಿಯಲ್ಲಿವೆ. ಈ ಬಾರಿಯ ಉತ್ಸವವನ್ನು ಆಜಾದಿ ಕಾ ಅಮೃತ್ ಮಹೋತ್ಸವ್ ಅಂತ ಆಚರಿಸಲಾಗುತ್ತಿದೆ. ರವಿವಾರದಂದು ಕೆಂಪುಕೋಟೆಯ ಮೇಲೆ ಭಾರತೀಯ ವಾಯುದಳದ ಹೆಲಕ್ಯಾಪ್ಟರ್ಗಳು ಹೂವಿನ ಸುರಿಮಳೆ ಮಾಡಲಿದ್ದು ಅದರ ರಿಹರ್ಸಲ್ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಹಾಗೆಯೇ ಅದರ ಮುನ್ನಾ ದಿನವಾಗಿರುವ ಶನಿವಾರ ಭಾರತದ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಸಹ ದೇಶವನ್ನು ಉದ್ದೇಶಿಸಿ ಮಾತಾಡಲಿದ್ದಾರೆ.

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ದೆಹಲಿ ಮೆಟ್ರೋ ರೇಲ್ ಕಾರ್ಪೋರೇಶನ್ ಸಾಮಾನ್ಯ ದಿನಗಳಂತಯೇ ಸೇವೆಯನ್ನು ಜಾರಿಯಲ್ಲಿಡುವುದಾಗಿ ಘೋಷಣೆ ಮಾಡಿದೆ. ಆದರೆ ಮೆಟ್ರೋ ಸ್ಟೇಶನ್ಗಳ ಪಾರ್ಕಿಂಗ್ ಲಾಟ್ಗಳು ಆಗಸ್ಟ್ 14 ಬೆಳಗ್ಗೆಯಿಂದ ಆಗಸ್ಟ್ 15 ಮಧ್ಯಾಹ್ನ 2 ಗಂಟೆವರೆಗೆ ಮುಚ್ಚಿರುತ್ತವೆ ಎಂದು ಡಿ ಎಮ್ ಆರ್ ಸಿ ಹೇಳಿದೆ.

ಕೆಂಪುಕೋಟೆಯ ಸುತ್ತ ಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯ ಟ್ರಾಫಿಕ್ ವಿಭಾಗ ಆಗಸ್ಟ್ 15 ರ ಸಂಚಾರ ವ್ವವಸ್ಥೆ ಬಗ್ಗೆ ಒಂದು ನೀಲಿನಕ್ಷೆಯನ್ನು ಬಿಡುಗಡೆ ಮಾಡಿದೆ. ಪ್ರತಿ ಸಲದಂತೆ ಈ ಬಾರಿಯೂ ಭಯೋತ್ಪಾದಕರು ಸಂಭ್ರಮ ಹಾಳುಮಾಡುವ ಕುತಂತ್ರ ನಡೆಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಫೂಲ್​ ಪ್ರೂಫ್​  ಭದ್ರತಾ ಏರ್ಪಾಟುಗಳನ್ನು ಮಾಡಲಾಗಿದೆ.

ದೆಹಲಿ ಸಂಚಾರಿ ಪೊಲೀಸ್ ನೀಡುತ್ತಿರುವ ಪಾಸ್ಗಳನ್ನು ಹೊಂದಿರುವವರಿಗೆ ಮಾತ್ರ ಕೆಂಪುಕೋಟೆ ಬಳಿ ನಡೆಯುವ ಆಚರಣೆಗಳಲ್ಲಿ ಭಾಗಿಯಾಗಲು ಅನುಮತಿ ನೀಡಲಾಗುವುದು ಎಂದು ದೆಹಲಿ ಸಂಚಾರಿ ಪೊಲೀಸ್ ಆಯಕ್ತ ಸಂಜಯ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಸಾಸಿವೆ ಕಾಳುಗಳಂತೆ ಉದುರಿ ಬಿದ್ದ ಸಾವಿರಾರು ಜನ! ಮೈನವಿರೇಳಿಸುವ ಈ ವಿಡಿಯೋ ಮಿಸ್​ ಮಾಡ್ಕೋಬೇಡಿ​

Follow us on