ಸಾಸಿವೆ ಕಾಳುಗಳಂತೆ ಉದುರಿ ಬಿದ್ದ ಸಾವಿರಾರು ಜನ! ಮೈನವಿರೇಳಿಸುವ ಈ ವಿಡಿಯೋ ಮಿಸ್​ ಮಾಡ್ಕೋಬೇಡಿ​

ಕಪ್ಪು ಮತ್ತು ಬಿಳಿ ಬಣ್ಣದ ಧಿರಿಸು ತೊಟ್ಟ ಸುಮಾರು 5,445 ಮಂದಿಯನ್ನು ಒಳಗೊಂಡ ಈ ಅದ್ಭುತ ಚಿತ್ರಣವನ್ನು ದುಬೈನ ಶಾರ್ಜಾದಲ್ಲಿರುವ ಇಂಡಿಯಾ ಇಂಟರ್​ನ್ಯಾಶನಲ್ ಸ್ಕೂಲ್​ನ ವಿದ್ಯಾರ್ಥಿಗಳು ಇದನ್ನು ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದೆ.

ಸಾಸಿವೆ ಕಾಳುಗಳಂತೆ ಉದುರಿ ಬಿದ್ದ ಸಾವಿರಾರು ಜನ! ಮೈನವಿರೇಳಿಸುವ ಈ ವಿಡಿಯೋ ಮಿಸ್​ ಮಾಡ್ಕೋಬೇಡಿ​
ವೈರಲ್​ ಆದ ವಿಡಿಯೋ
Follow us
TV9 Web
| Updated By: Skanda

Updated on: Aug 09, 2021 | 1:50 PM

ಈ ಜಗತ್ತಿನಲ್ಲಿ ಎಷ್ಟೋ ಜನರಿಗೆ ತಾವು ಅತ್ಯದ್ಭುತ ಸಾಧನೆ ಮಾಡಬೇಕು, ಗಿನ್ನಿಸ್ ದಾಖಲೆ ಮಾಡಬೇಕು. ಎಲ್ಲರೂ ಬೆರಗುಗೊಂಡು ತಿರುಗಿ ನೋಡುವಂತೆ ಏನನ್ನಾದರೂ ಮಾಡಬೇಕು ಎಂಬ ಆಸೆ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಅಪರೂಪದ ಘಟನೆಗಳನ್ನು ದಾಖಲು ಮಾಡಿದ ದೃಶ್ಯಗಳನ್ನೊಳಗೊಂಡ ಪುಟಗಳೇ ನೂರಾರು ಸಿಗುತ್ತವೆ. ಅವೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಆ ಪೈಕಿ ಎಷ್ಟೋ ವಿಡಿಯೋಗಳಿಗೆ ಆಯಸ್ಸು ಮುಗಿಯಿತು ಎಂದೇ ಇರುವುದಿಲ್ಲ. ಅವು ಎಂದಿಗೂ ನೋಡುಗರ ಕಣ್ಮನ ತಣಿಸುತ್ತಾ ನಿತ್ಯ ನೂತನವಾಗಿರುತ್ತವೆ. ಇದೀಗ ಮೂರು ವರ್ಷಗಳ ಹಳೇ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ನೋಡುಗರು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಆ ಕುರಿತಾದ ಒಂದಷ್ಟು ಕುತೂಹಲಕರ ಮಾಹಿತಿ ಇಲ್ಲಿದೆ.

ಇನ್​ಸ್ಟಾಗ್ರಾಂನಲ್ಲಿ ಗಿನ್ನಿಸ್ ವರ್ಲ್ಡ್​ ರೆಕಾರ್ಡ್ಸ್ ಅಧಿಕೃತ ಖಾತೆಯಿಂದ ಹಳೆಯ ವಿಡಿಯೋ ಒಂದನ್ನು ಮತ್ತೆ ಹಂಚಿಕೊಳ್ಳಲಾಗಿದೆ. 2018ರ ವಿಡಿಯೋ ಇದಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಿಕ್ಕಾಪಟ್ಟೆ ವೈರಲ್​ ಆಗಿ, ಸಮಯ ಉರುಳಿದರೂ ಅದಿನ್ನೂ ತಾಜಾತನದಿಂದ ಕೂಡಿದೆ ಎನ್ನುವುದು ನಿರೂಪಿತವಾಗಿದೆ.

ನೋಡಿದ ತಕ್ಷಣ ಜಗ್​ ಒಂದರಿಂದ ಸಾಸಿವೆ ಕಾಳುಗಳಂತಹ ಕಣಗಳು ಉರುಳಿ ಬೀಳುತ್ತಿವೆಯೇನೋ ಎಂದು ಭಾಸವಾಗುವ ಈ ವಿಡಿಯೋದಲ್ಲಿ ವಾಸ್ತವವಾಗಿ ಇರುವುದು ಮನುಷ್ಯರು. ವಿಶ್ವದ ಅತಿದೊಡ್ಡ ಮಾನವ ಸಮೂಹವನ್ನೊಳಗೊಂಡು ಮಾಡಿದ ಈ ಅದ್ಭುತ ವಿಡಿಯೋ ಅರೇಬಿಕ್​ನ ಸಾಂಪ್ರದಾಯಿಕ ಕಾಫಿ ಪಾಟ್​ ದಲ್ಹಾವನ್ನು ಹೋಲುತ್ತದೆ. ಪಾಟ್​ನಿಂದ ಕಾಫಿ ಕೆಳಗೆ ಸುರಿಯುತ್ತಿದೆಯೇನೋ ಎಂಬ ರೀತಿಯಲ್ಲೇ ಅಲ್ಲಿರುವ ಮನುಷ್ಯರ ಚಲನೆಯೂ ಕಂಡುಬರುವುದು ಮನಮೋಹಕವಾಗಿದೆ.

ಕಪ್ಪು ಮತ್ತು ಬಿಳಿ ಬಣ್ಣದ ಧಿರಿಸು ತೊಟ್ಟ ಸುಮಾರು 5,445 ಮಂದಿಯನ್ನು ಒಳಗೊಂಡ ಈ ಅದ್ಭುತ ಚಿತ್ರಣವನ್ನು ದುಬೈನ ಶಾರ್ಜಾದಲ್ಲಿರುವ ಇಂಡಿಯಾ ಇಂಟರ್​ನ್ಯಾಶನಲ್ ಸ್ಕೂಲ್​ನ ವಿದ್ಯಾರ್ಥಿಗಳು ಇದನ್ನು ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದೆ. ಇನ್​ಸ್ಟಾಗ್ರಾಂನಲ್ಲಿಯೂ ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದು ಈ ಕಲೆಯ ಹಿಂದಿನ ಕಲಾಕಾರನಿಗೆ ಜೈ ಎಂದಿದ್ದಾರೆ.

ಅಂದಹಾಗೆ, ಕೊರೊನಾ ಸಂಕಷ್ಟ ತಲೆದೋರುವುದಕ್ಕೂ ಮುಂಚಿನ ವಿಡಿಯೋ ಇದಾಗಿದ್ದು, ಇದನ್ನು ನೋಡಿದ ಬಹುತೇಕರು ಆ ಕಾಲವೆಷ್ಟು ಚೆನ್ನಾಗಿತ್ತು. ಇನ್ನು ಮುಂದೆ ಹೀಗೆ ಜನ ಸೇರುವ ಅವಕಾಶ ಸಿಗುವುದಾದರೂ ಯಾವಾಗ ಎಂದು ಕೊರೊನಾವನ್ನು ಶಪಿಸುತ್ತಾ ಹಳೆಯ ಕಾಲವನ್ನು ನೆನಪಿಸಿಕೊಂಡಿದ್ದಾರೆ.

(Old video of largest transforming human video goes viral must watch)

ಇದನ್ನೂ ಓದಿ: ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಇದು: ವಿಡಿಯೋ ನೋಡಿ 

ಸೀರೆಯುಟ್ಟು ಸೊಂಟ ಬಳುಕಿಸುವ ಈ ನಟಿಯ ಒಂದೊಂದು ಫೋಟೋಕ್ಕೂ ಸಾವಿರಾರು ಅಭಿಮಾನಿಗಳು