Basangouda Yatnal: ಮಾಧ್ಯಮದವರ ಜೊತೆ ಎದೆಯುಬ್ಬಿಸಿ ಮಾತಾಡುತ್ತಿದ್ದ ಬಸನಗೌಡ ಯತ್ನಾಳ್ ಇವತ್ತು ಓಡಿಹೋಗಿದ್ದು ಯಾಕೋ?
ಪಕ್ಷದ ಹಿರಿಯ ನಾಯಕರು ಯತ್ನಾಳ್ ಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿರುವಂತಿದೆ ಮತ್ತು ಮಾಧ್ಯಮಗಳಿಗೆ ಹೇಳಿಕೆ ನಿಡಕೂಡದು ಅಂತ ತಾಕೀತು ಸಹ ಮಾಡಿರಬಹುದು!
ಬೆಂಗಳೂರು: ಮಾಧ್ಯಮದವರನ್ನು ಕಂಡಾಕ್ಷಣ ಎದೆ ಸೆಟೆಸಿಕೊಂಡು ಬಂದ ಕೇಳದ ಪ್ರಶ್ನೆಗಳಿಗೂ ಪ್ರತಿಕ್ರಿಯೆ ನೀಡುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಂದು ನಗರದ ಬಿಜೆಪಿ ಕಚೇರಿಯಲ್ಲಿ (BJP Office) ಅದೇ ಮಾಧ್ಯಮದವರನ್ನು ನೋಡಿ ಬೇಡ ಬೇಡ ಎನ್ನುವಂತೆ ಎರಡೂ ಕೈಯಾಡಿಸಿ ಪಲಾಯನಗೈದರು. ಸಾರ್ವಜನಿಕವಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿದ ಮತ್ತು ತಮ್ಮ ಪಕ್ಷದವರ ವಿರುದ್ಧವೇ ಸತತವಾಗಿ ಟೀಕೆಗಳನ್ನು ಮಾಡುತ್ತಾ ರೆಬೆಲ್ ಕಾರ್ಯಕರ್ತನಂತೆ (rebel worker) ವರ್ತಿಸುತ್ತಿದ್ದ ಯತ್ನಾಳ್ ಗೆ ಬಿಜೆಪಿ ರಾಜ್ಯ ಘಟಕ ನೊಟೀಸ್ ನೀಡಿತ್ತು ಮತ್ತು ಅದಕ್ಕೆ ಸಮಜಾಯಿಷಿ ನೀಡಲು ಕಚೇರಿಗೆ ಬಂದಿದ್ದರು. ಕಚೇರಿಯೊಳಗೆ ಹೋಗುವಾಗಲೂ ಅವರು ಕೊಟ್ಟಿರುವ ನೋಟಿಸ್ ವಾಪಸ್ಸು ತೆಗೆದುಕೊಳ್ಳುವಂತೆ ಹೇಳಲು ಹೋಗುತ್ತಿದ್ದೇನೆ ಅನ್ನುತ್ತಾ ಕೈ ಅಲ್ಲಾಡಿಸಿಕೊಂಡು ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದರೂ ಉತ್ತರಿಸದೆ ಲಿಫ್ಟ್ ನೊಳಗೆ ಓಡಿದ್ದರು. ಪಕ್ಷದ ಹಿರಿಯ ನಾಯಕರು ಯತ್ನಾಳ್ ಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿರುವಂತಿದೆ ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡಕೂಡದು ಅಂತ ತಾಕೀತು ಸಹ ಮಾಡಿರಬಹುದು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ