ಹೆಚ್ ಡಿ ಕುಮಾರಸ್ವಾಮಿ ಪರ ಮೃದುಧೋರಣೆ ಪ್ರದರ್ಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಸಮಯದಲ್ಲಿ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದರು!

|

Updated on: Aug 23, 2023 | 5:54 PM

ಜುಲೈನಲ್ಲಿ ಉತ್ತಮ ಮಳೆಯಾದ ಬಳಿಕ ಆಗಸ್ಟ್ ನಲ್ಲೂ ಅದು ಮುಂದುವರಿಯುತ್ತದೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದು ಹುಸಿ ಹೋಯಿತು, ಅಲ್ಲದೆ ತಮಿಳುನಾಡು ಸರ್ಕಾರ ಕರ್ನಾಟಕ ಸುಪ್ರೀಮ್ ಕೋರ್ಟ್ ಆದೇಶವನ್ನು ಪಾಲಿಸುವುದಿಲ್ಲ ಅಂತ ಪದೇಪದೆ ತಗಾದೆ ತೆಗೆಯುವುದರಿಂದ ನಾವು ಸರಿಯಾದ ಸಮಯದಲ್ಲಿ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಒಂದಿಲ್ಲೊಂದು ತಗಾದೆ ತೆಗೆಯುತ್ತಲೇ ಇರುತ್ತದೆ. ಇಂದು ಇದೇ ಅಂಶವನ್ನು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸರ್ವಪಕ್ಷ ಸಭೆಯನ್ನು ನಡೆಸಿದರು. ಸಭೆಯ ನಂತರ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಸಿದ್ದರಾಮಯ್ಯನವರಿಗೆ ತಮಿಳುನಾಡುಗೆ ನೀರು ಹರಿಸುವ ವಿಚಾರದಲ್ಲಿ ಸರ್ಕಾರ ಪ್ರತಿಪಕ್ಷಗಳನ್ನು ಕಡೆಗಣಿಸುತ್ತಿದೆ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡಿರುವ ಆರೋಪದ ಬಗ್ಗೆ ಹೇಳಿದಾಗ ಅವರು ಫಾರ್ ಎ ಚೇಂಜ್, ಜೆಡಿಎಸ್ ನಾಯಕನ ಬಗ್ಗೆ ಮೃದು ಧೋರಣೆ ಪ್ರದರ್ಶಿಸಿದರು. ಅವರು ಹಾಗೆ ಹೇಳಿಲ್ಲ, ಸರ್ವಪಕ್ಷ ಸಭೆಯನ್ನು (all party meet) ಮೊದಲೇ ಕರೆಯಬೇಕಿತ್ತು ಅಂತಷ್ಟೇ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಜುಲೈನಲ್ಲಿ ಉತ್ತಮ ಮಳೆಯಾದ ಬಳಿಕ ಆಗಸ್ಟ್ ನಲ್ಲೂ ಅದು ಮುಂದುವರಿಯುತ್ತದೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದು ಹುಸಿ ಹೋಯಿತು, ಅಲ್ಲದೆ ತಮಿಳುನಾಡು ಸರ್ಕಾರ ಕರ್ನಾಟಕ ಸುಪ್ರೀಮ್ ಕೋರ್ಟ್ ಆದೇಶವನ್ನು ಪಾಲಿಸುವುದಿಲ್ಲ ಅಂತ ಪದೇಪದೆ ತಗಾದೆ ತೆಗೆಯುವುದರಿಂದ ನಾವು ಸರಿಯಾದ ಸಮಯದಲ್ಲಿ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ