ಮಂಗಳೂರಿನ ಪಿಲಿಕುಳ ಉದ್ಯಾನವನ ಸಂಪೂರ್ಣ ಜಲಾವೃತ, ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿ ಉದ್ಯಾನವನಕ್ಕೆ ಈ ಸ್ಥಿತಿ!
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಪಿಲಿಕುಳ ಉದ್ಯಾನವನವೇ ಜಲಾವೃತಗೊಂಡಿದೆ. ಉದ್ಯಾನವನ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅದು ಜಲಾವೃತಗೊಂಡಿದ್ದು ಅಲ್ಲಿ ವಾಸವಾಗಿರುವ ಪ್ರಾಣಿಗಳೆಲ್ಲ ಮಳೆಯಿಂದ ಕಂಗೆಟ್ಟಿವೆ.
ಮಂಗಳೂರಿನ ಪಿಲಿಕುಳ (Pilikula Park) ಜೈವಿಕ ಉದ್ಯಾನವನ (ನಿಸರ್ಗಧಾಮ) ಯಾರಿಗೆ ಗೊತ್ತಿಲ್ಲ ಮಾರಾಯ್ರೇ? ಮಂಗಳೂರಿಗೆ ಭೇಟಿ ನೀಡುವ ಜನರು ಉದ್ಯಾನವನಕ್ಕೆ ಭೇಟಿ ನೀಡುವುದನ್ನು ತಮ್ಮ ಆದ್ಯತೆಯ ಪಟ್ಟಿಯಲ್ಲಿ ಸೇರಿಸಿರುತ್ತಾರೆ. ಆದರೆ ಈ ಬಾರಿ ಏನಾಗಿದೆ ಗೊತ್ತಾ? ಕರಾವಳಿ ಭಾಗದಲ್ಲಿ (coastal belt) ಸತತವಾಗಿ ಸುರಿಯುತ್ತಿರುವ (incessant rains) ಮಳೆಯಿಂದಾಗಿ ಇಡೀ ಪಿಲಿಕುಳ ಉದ್ಯಾನವನವೇ ಜಲಾವೃತಗೊಂಡಿದೆ. ಉದ್ಯಾನವನ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅದು ಜಲಾವೃತಗೊಂಡಿದ್ದು ಅಲ್ಲಿ ವಾಸವಾಗಿರುವ ಪ್ರಾಣಿಗಳೆಲ್ಲ ಮಳೆಯಿಂದ ಕಂಗೆಟ್ಟಿವೆ.
ಇದನ್ನೂ ಓದಿ: Viral Video: 50ನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿ ಸೌರವ್ ಗಂಗೂಲಿ ಮಾಡಿದ ಡಾನ್ಸ್ ವಿಡಿಯೋ ವೈರಲ್
Published on: Jul 09, 2022 05:49 PM