ಅಮರನಾಥ ಗುಹೆ ಬಳಿ ಮೇಘಸ್ಫೋಟ: “ನಮ್ಮ ಕಣ್ಣಮುಂದೆನೇ ಎಲ್ರೂ ಕೊಚ್ಚಿ ಹೋದ್ರು ಸಾರ್”
ಜಮ್ಮು ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಮರನಾಥ ಗುಹೆ ಬಳಿ ಮೆಘಸ್ಫೋಟ ಸಂಭವಿಸಿದೆ. ದುರ್ಘಟನೆ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಕಟದ ಯಾತ್ರಿಯೊಬ್ಬರು ಕಣ್ಣಾರೆ ಕಂಡ ದೃಶ್ಯಾವಳಿಯನ್ನು ಟಿವಿ9 ಜೊತೆ ಎಳೆಎಳೆಯಾಗಿ ಹಂಚಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಮರನಾಥ ಗುಹೆ ಬಳಿ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹಕ್ಕೆ ಹಲವು ಪ್ರವಾಸಿಗರು ಕೊಚ್ಚಿಕೊಂಡು ಹೋಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ವಿವಿಧ ರಾಜ್ಯಗಳ ಯಾತ್ರಾರ್ಥಿಗಳ ಪೈಕಿ ಕರ್ನಾಟಕದವರು ಕೂಡ ಸೇರಿದ್ದಾರೆ. ಕಣ್ಣಮುಂದೆಯೇ ದುರ್ಘಟನೆ ನಡೆದ ಬಗ್ಗೆ ಕರ್ನಾಟಕದ ಯಾತ್ರಾರ್ಥಿಯೊಬ್ಬರು ಟಿವಿ9 ಜೊತೆ ಮಾತನಾಡಿದ್ದಾರೆ. ”ಕುದುರೆ ಹತ್ತಿದ ವೇಳೆ ಜೋರಾಗಿ ಮಳೆ ಬರಲು ಆರಂಭವಾಯಿತು. ಈ ವೇಳೆ ಯಾತ್ರಿಗಳನ್ನು ಮೇಲಕ್ಕೆ ಹೋಗದಂತೆ ತಡೆಯಲಾಯಿತು. ನೋಡುನೋಡುತ್ತಿದ್ದಂತೆ ಬಂಡೆಗಳು ಉರುಳಿಬಂದವು, ಕಣ್ಣ ಮುಂದೆಯೇ ಹಲವರು ಕೊಚ್ಚಿ ಹೋದರು. ಈ ಹಿಂದೆ ಘಟನೆಗಳನ್ನು ಟಿವಿ ಮಾಧ್ಯಮಗಳಲ್ಲಿ ನೋಡಿದ್ದೆವು. ಆದರೆ ಕಣ್ಣಾರೆ ದೃಶ್ಯಗಳನ್ನು ಕಂಡ ನಂತರ ಕೈಕಾಲುಗಳಿಗೆ ನಡುಕ ಉಂಟಾಯಿತು. ಕೊಂಚ ತಪ್ಪಿದರೂ ನನ್ನ ಜೊತೆ ಇದ್ದವರು ಪ್ರಪಾತಕ್ಕೆ ಬೀಳುತ್ತಿದ್ದರು. ಈ ವೇಳೆ ಅವರ ಪತ್ನಿ ಮತ್ತು ಮಕ್ಕಳು ನನ್ನ ನೆನಪಿಗೆ ಬಂದರು. ಈ ಘಟನೆಯನ್ನು ಸಾಯುವವರೆಗೂ ಮರೆಯಲು ಸಾಧ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ