Sri Lanka Crisis: ಶ್ರೀಲಂಕಾ ಅಧ್ಯಕ್ಷ ಪರಾರಿ; ಸರ್ಕಾರಿ ಬಂಗಲೆಗೆ ನುಗ್ಗಿ, ಸ್ವಿಮಿಂಗ್ ಪೂಲ್ಗೆ ಜಿಗಿದ ಜನರು
ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ದಾಟಿ ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಗೋತಬಯ ರಾಜಪಕ್ಸ ಅವರ ಬಂಗಲೆಯಲ್ಲಿರುವ ಸ್ವಿಮಿಂಗ್ ಪೂಲ್ಗೆ ಜಿಗಿದಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು (Sri Lanka Economic Crisis) ಬಗೆಹರಿಸಲು ವಿಫಲರಾದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ (Gotabaya Rajapaksa) ಅವರ ವಿರುದ್ಧ ಆಕ್ರೋಶಗೊಂಡ ಜನರು ಅವರ ಸರ್ಕಾರ ಬಂಗಲೆಗೆ ಮುತ್ತಿಗೆ ಹಾಕಿದ್ದಾರೆ. ಇದರಿಂದ ಗೋತಬಯ ರಾಜಪಕ್ಸ ಮನೆಯಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ. ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಅವರ ನಿವಾಸದ ಕಾಂಪೌಂಡ್‌ನೊಳಗೆ ನುಗ್ಗಿದ್ದಾರೆ. ಪ್ರತಿಭಟನಾಕಾರರು ಅಧ್ಯಕ್ಷರ ಭವನವನ್ನು ಅತಿಕ್ರಮಿಸದಂತೆ ತಡೆಯಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ದಾಟಿ ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಗೋತಬಯ ರಾಜಪಕ್ಸ ಅವರ ಬಂಗಲೆಯಲ್ಲಿರುವ ಸ್ವಿಮಿಂಗ್ ಪೂಲ್ಗೆ ಜಿಗಿದಿದ್ದಾರೆ.
Latest Videos