ರಾಯಚೂರಿನಲ್ಲಿ ಬೈಕ್ ಹೋಯ್ತಪ್ಪ ಅಂತ ಕಣ್ಣೀರಿಟ್ಟು ಗೋಳಾಡಿದ ಸವಾರ; ವಿಡಿಯೋ ಇದೆ
ವಾಹನ ಸವಾರರಿಗೆ ದಂಡ ಹಾಕುವ ಬದಲು ಇನ್ಸುರೆನ್ಸ್ ಮಾಡಿಸಲು ಅವಕಾಶ ನೀಡುತ್ತಿದ್ದಾರೆ. ಇನ್ಸುರೆನ್ಸ್ ಇಲ್ಲದಕ್ಕೆ 1,000 ರೂ.ದಂಡದ ಬದಲು, 1,000 ರೂ. ಬೈಕ್ ಇನ್ಸುರೆನ್ಸ್ ಮಾಡಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಅಪಘಾತವೊಂದರಲ್ಲಿ (Accident) ರಾಯಚೂರಿನ ಓರ್ವ ಯುವಕ ಮೃತಪಟ್ಟಿದ್ದ. ಇನ್ಸುರೆನ್ಸ್ (Insurance) ಇಲ್ಲದ ಹಿನ್ನೆಲೆ ಕುಟುಂಬಕ್ಕೆ ಪರಿಹಾರ ಸಿಗಲಿಲ್ಲ. ಇದರಿಂದ ರಾಯಚೂರು ಜಿಲ್ಲೆಯಾದ್ಯಂತ ಪೊಲೀಸರು ಐದು ದಿನಗಳ ಕಾಲ ಇನ್ಸುರೆನ್ಸ್ ಡ್ರೈವ್ ನಡೆಸಿದ್ದಾರೆ. ವಾಹನ ಸವಾರರಿಗೆ ದಂಡ ಹಾಕುವ ಬದಲು ಇನ್ಸುರೆನ್ಸ್ ಮಾಡಿಸಲು ಅವಕಾಶ ನೀಡುತ್ತಿದ್ದಾರೆ. ಇನ್ಸುರೆನ್ಸ್ ಇಲ್ಲದಕ್ಕೆ 1,000 ರೂ.ದಂಡದ ಬದಲು, 1,000 ರೂ. ಬೈಕ್ ಇನ್ಸುರೆನ್ಸ್ ಮಾಡಿಸುತ್ತಿದ್ದಾರೆ. ಹೀಗೆ ರಾಯಚೂರು ನಗರ, ಮಸ್ಕಿ, ಸಿರವಾರ, ಸಿಂಧನೂರು, ಲಿಂಗಸುಗೂರು ಸೇರಿ ಹಲವು ಪಟ್ಟಣಗಳಲ್ಲಿ ಪೊಲೀಸರು ವಿಮೆ ಇಲ್ಲದ ಬೈಕ್ಗಳನ್ನ ವಶಕ್ಕೆ ಪಡೆಯುತ್ತಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಬೈಕ್ ಹೋಯ್ತಪ್ಪ ಅಂತ ಕಣ್ಣೀರಿಟ್ಟು ಗೋಳಾಡಿದ್ದಾರೆ.
ಇದನ್ನೂ ಓದಿ: 6,6,6,6,6: ಒಂದೇ ಓವರ್ನಲ್ಲಿ ಸಿಕ್ಸ್ಗಳ ಸುರಿಮಳೆ: ಟಿ20 ಲೀಗ್ನಲ್ಲಿ ಹೊಸ ದಾಖಲೆ

