6,6,6,6,6: ಒಂದೇ ಓವರ್ನಲ್ಲಿ ಸಿಕ್ಸ್ಗಳ ಸುರಿಮಳೆ: ಟಿ20 ಲೀಗ್ನಲ್ಲಿ ಹೊಸ ದಾಖಲೆ
ಚಿಕಾಗೋ ಟೈಗರ್ಸ್ ಪರ ಕರಣ್ ಕುಮಾರ್ 53, ಮನನ್ ಪಟೇಲ್ 43 ರನ್ ಗಳಿಸಿದರೆ, ಕೆಲ್ವಿನ್ ಸಾವೇಜ್ 49 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಅದರಂತೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಅಮೆರಿಕದಲ್ಲಿ ನಡೆಯುತ್ತಿರುವ ಮೈನರ್ ಲೀಗ್ ಕ್ರಿಕೆಟ್‌ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸ್ ಚಚ್ಚಿಸಿಕೊಳ್ಳುವ ಭಾರತೀಯ ಮೂಲದ ವೇಗಿಯೊಬ್ಬರು ಅತ್ಯಂತ ಕೆಟ್ಟ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿಕಾಗೊ ಟೈಗರ್ಸ್ ಹಾಗೂ ಚಿಕಾಗೊ ಬ್ಲಾಸ್ಟರ್ಸ್ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚಿಕಾಗೊ ಟೈಗರ್ಸ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿದ ಟೈಗರ್ಸ್ ಬ್ಯಾಟ್ಸ್ಮಮ್ ಕೆಲ್ವಿನ್ ಸಾವೇಜ್ ಸ್ಪೋಟಕ ಇನಿಂಗ್ಸ್ ಆಡಿದ್ದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಾಯಿಸಿದರು.
ಸಿಕ್ಸ್ – ಫೋರ್ಗಳ ಅಬ್ಬರದೊಂದಿಗೆ ಬ್ಯಾಟ್ ಬೀಸಿದ ಕೆಲ್ವಿನ್ 19ನೇ ಓವರ್ನಲ್ಲಿ ಸಿಡಿಲಬ್ಬರ ಪ್ರದರ್ಶಿಸಿದ್ದರು. ಭಾರತೀಯ ಮೂಲದ ಮೋಹಿತ್ ಪಟೇಲ್ ಅವರ ಒಂದೇ ಓವರ್ನಲ್ಲಿ ಸಿಕ್ಸ್ಗಳ ಸುರಿಮಳೆಗೈದರು. ಮೋಹಿತ್ ಅವರ ಮೊದಲ ಎರಡು ಎಸೆತಗಳಲ್ಲಿ ಕೆಲ್ವಿನ್ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ ಬೌಂಡರಿ ಸಿಡಿಸಿದರು. ಇದಾದ ಬಳಿಕ ಮುಂದಿನ ಮೂರು ಎಸೆತಗಳಲ್ಲಿ 3 ಸಿಕ್ಸ್ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದರು. ಅಂದರೆ ಮೈನರ್ ಟಿ20 ಲೀಗ್ನಲ್ಲಿ ಒಂದೇ ಓವರ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಕೆಲ್ವಿನ್ ಪಾಲಾಗಿದೆ. ಮತ್ತೊಂದೆಡೆ ಒಂದೇ ಓವರ್ನಲ್ಲಿ 34 ರನ್ ಬಿಟ್ಟುಕೊಡುವ ಮೂಲಕ ಮೋಹಿತ್ ಪಟೇಲ್ ಅತ್ಯಂತ ಕೆಟ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡರು.
Calvin Savage ABSOLUTELY SMASHED the 19th over ???
6-6-4-6-6-6
He’s one run away from a half century. The Tigers are 180/5 with 6 balls to come!!! pic.twitter.com/Gm010bxe3U
— Minor League Cricket (@MiLCricket) July 9, 2022
ಇನ್ನು ಈ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸುವ ಮೂಲಕ ಕೆಲ್ವಿನ್ ಸಾವೇಜ್ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ಕ್ಕೆ ತಂದು ನಿಲ್ಲಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ಚಿಕಾಗೊ ಬ್ಲಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ 183 ರನ್ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಚಿಕಾಗೊ ಟೈಗರ್ಸ್ ತಂಡವು 8 ರನ್ಗಳ ರೋಚಕ ಜಯ ಸಾಧಿಸಿತು.
Calvin Savage is looking to cement himself in the #MinorLeagueCricket history books ? ? What an absolutely amazing over to watch ?
?: Jessica Dill pic.twitter.com/INdT467y8b
— Minor League Cricket (@MiLCricket) July 9, 2022
ಚಿಕಾಗೋ ಟೈಗರ್ಸ್ ಪರ ಕರಣ್ ಕುಮಾರ್ 53, ಮನನ್ ಪಟೇಲ್ 43 ರನ್ ಗಳಿಸಿದರೆ, ಕೆಲ್ವಿನ್ ಸಾವೇಜ್ 49 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಅದರಂತೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.