Karnataka Assembly Polls: ತನ್ನ ಹೊರತಾಗಿ ಡಿಕೆ ಶಿವಕುಮಾರ್ ಹಾಗೂ ಇನ್ನಿತರು ಸಿಎಂ ರೇಸಲ್ಲಿರುವುದನ್ನು ಮೊದಲಬಾರಿ ಅಂಗೀಕರಿಸಿದ ಸಿದ್ದರಾಮಯ್ಯ!

|

Updated on: Apr 04, 2023 | 5:31 PM

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿರುವುದರಿಂದ ನಿಶ್ಚಿತವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.

ದೆಹಲಿ: ಪ್ರಾಯಶ: ಮೊದಲಬಾರಿಗೆ ಸಿದ್ದರಾಮಯ್ಯ (Siddaramaiah) ಕರ್ನಾಟದ ಮುಖ್ಯಮಂತ್ರಿ ಹುದ್ದೆಗೆ ತನ್ನಂತೆಯೇ ಡಿಕೆ ಶಿವಕುಮಾರ್ (DK Shivakumar) ಕೂಡ ಅಕಾಂಕ್ಷಿಯಾಗಿದ್ದಾರೆ ಎನ್ನುವುದನ್ನು ಬಹಿರಂಗವಾಗಿ ಅಂಗೀಕರಿಸಿದ್ದಾರೆ. ತಾವಿಬ್ಬರಲ್ಲದೆ, ಎಮ್ ಬಿ ಪಾಟೀಲ್ (MB Patil) ಮತ್ತು ಜಿ ಪರಮೇಶ್ವರ್ (G Parameshwar) ಕೂಡ ರೇಸ್ ನಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ನಿನ್ನೆ ಅವರು ದೆಹಲಿಯ ಎಲೆಕ್ಟ್ರಾನಿಕ್ ಮೀಡಿಯಾವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಶಿವಕುಮಾರ್ ರೇಸ್ ನಲ್ಲಿದ್ದಾರೆ ಆದರೆ ಹೈಕಮಾಂಡ್ ಅವರ ಅಭ್ಯರ್ಥಿತ್ವ ಒಪ್ಪುವುದಿಲ್ಲ ಎಂದು ಹೇಳಿರುವರೆಂದು ವರದಿಯಾಗಿತ್ತು. ಅದಕ್ಕೆ ಸಮಜಾಯಿಷಿ ನೀಡಿದ ಸಿದ್ದರಾಮಯ್ಯ ತಾನು ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ, ರೇಸ್ ನಲ್ಲಿ ಸಾಕಷ್ಟು ಜನರಿದ್ದಾರೆ ಆದರೆ ಶಾಸಕಾಂಗ ಪಕ್ಷದ ಆಯ್ಕೆ ಮತ್ತು ಹೈಕಮಾಂಡ್ ನಿರ್ಣಯವೇ ಅಂತಿಮವಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿರುವುದರಿಂದ ನಿಶ್ಚಿತವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 04, 2023 05:31 PM