Presence of Mind: ಹಿರಿ ಮಹಿಳೆಯೊಬ್ಬರ ಸಮಯಪ್ರಜ್ಞೆ ಮಂಗಳೂರು ಬಳಿ ದೊಡ್ಡ ರೈಲು ದುರಂತ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿತು!

Presence of Mind: ಹಿರಿ ಮಹಿಳೆಯೊಬ್ಬರ ಸಮಯಪ್ರಜ್ಞೆ ಮಂಗಳೂರು ಬಳಿ ದೊಡ್ಡ ರೈಲು ದುರಂತ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 04, 2023 | 4:14 PM

ಪ್ರಾಯಶ: ಟ್ರೇನು ಅಲ್ಲಿಂದ ಹೋಗುವ ವೇಳೆ ತಿಳಿದಿದ್ದ ಚಂದ್ರಾವತಿ ಸಂಭಾವ್ಯ ಅಪಾಯವನ್ನು ಗ್ರಹಿಸಿ ಕೂಡಲೇ ಮನೆಗೆ ಓಡಿ ಒಂದು ಕೆಂಪುಬಟ್ಟೆಯನ್ನು ತೆಗೆದುಕೊಂಡು ರೈಲು ಬರುತ್ತಿದ್ದ ದಿಕ್ಕಿನತ್ತ ಓಡಿದ್ದಾರೆ.

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಏಪ್ರಿಲ್ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಂಗಳೂರು ಹೊರವಲಯದಲ್ಲಿರುವ ಪಚ್ಚನಾಡಿ ನಿವಾಸಿ ಚಂದ್ರಾವತಿಯವರ (Chandravati) ಹೆಸರನ್ನು ಉಲ್ಲೇಖಿಸಿ ಪ್ರಶಂಸಿದರೆ ಆಶ್ಚರ್ಯಪಡಬೇಡಿ. ಯಾಕೆಂದರೆ 70-ವರ್ಷ-ವಯಸ್ಸಿನ ಹಿರಿ ಮಹಿಳೆ ಮಾಡಿರುವ ಸಾಹಸದ ಕೆಲಸ ಪ್ರಶಂಸನೀಯ ಮತ್ತು ಅನುಕರಣೀಯ. ವಿಷಯವೇನೆಂದರೆ, ಪಚ್ಚನಾಡಿ (Pacchanadi) ಸಮೀಪದ ಮಂದಾರ ಹೆಸರಿನ ಸ್ಥಳದ ಮೂಲಕ ಹಾದುಹೋಗುವ ರೇಲ್ವೆ ಹಳಿಗಳ ಮೇಲೆ ಮರವೊಂದದು ಉರುಳಿ ಬಿದ್ದಿದೆ. ಅದನ್ನು ಚಂದ್ರಾವತಿ ಗಮನಿಸಿದ್ದಾರೆ. ಅದೇ ಸಮಯಕ್ಕೆ ಮಂಗಳೂರು-ಮುಂಬಯಿ ನಡುವೆ ಓಡುವ ಮತ್ಸ್ಯಗಂಧ  ರೈಲು ಅಲ್ಲಿಂದ ಹೋಗಬೇಕಿತ್ತು. ಪ್ರಾಯಶ: ಟ್ರೇನು ಅಲ್ಲಿಂದ ಹೋಗುವ ವೇಳೆ ತಿಳಿದಿದ್ದ ಚಂದ್ರಾವತಿ ಸಂಭಾವ್ಯ ಅಪಾಯವನ್ನು ಗ್ರಹಿಸಿ ಕೂಡಲೇ ಮನೆಗೆ ಓಡಿ ಒಂದು ಕೆಂಪುಬಟ್ಟೆಯನ್ನು ತೆಗೆದುಕೊಂಡು ರೈಲು ಬರುತ್ತಿದ್ದ ದಿಕ್ಕಿನತ್ತ ಓಡಿದ್ದಾರೆ. ಸಾಕಷ್ಟು ಅಂತರ ಕ್ರಮಿಸಿದ ಬಳಿಕ ಅವರು ಟ್ರೈನಿನ ಲೋಕೋಪೈಲಟ್ ಗೆ ಕಾಣುವ ಹಾಗೆ ಕೆಂಪುಬಟ್ಟೆಯನ್ನು ಬೀಸುತ್ತಾ ನಿಂತುಬಿಟ್ಟಿದ್ದಾರೆ. ಕೊಂಚ ಸಮಯದ ನಂತರ ಅಲ್ಲಿಗೆ ಆಗಮಿಸಿದ ಮತ್ಸ್ಯಗಂಧ ರೈಲು ಚಾಲಕನಿಗೆ ಚಂದ್ರಾವತಿ ಕೆಂಪುಬಟ್ಟೆ ಬೀಸುತ್ತಾ ನಿಂತಿದ್ದು ಕಂಡಿದೆ. ಅಪಾಯವನ್ನು ಅರಿತ ಚಾಲಕ ಟ್ರೈನನ್ನು ನಿಲ್ಲಿಸಿದ್ದಾರೆ. ಸ್ಥಳೀಯರು ಮರವನ್ನು ಹಳಿಗಳ ಮೇಲಿಂದ ತೆರವು ಮಾಡಿದ ಬಳಿಕ ಟ್ರೈನು ತನ್ನ ಯಾನ ಮುಂದುವರಿಸಿದೆ. ನೇತ್ರಾವತಿಯವರ ಸಮಯ ಪ್ರಜ್ಞೆ ಒಂದು ನಿಶ್ಚಿತ ದುರಂತ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದೆ. ಅವರ ಸಾಹಸವನ್ನು ಎಲ್ಲೆಡೆ ಹೊಗಳಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ