ಮಧ್ಯಾಹ್ನ ಊಟ ಮಾಡಿ ಮಲಗುವಷ್ಟರಲ್ಲಿ ಮರ ಬಿದ್ದ ಶಬ್ದ ಕೇಳಿತ್ತು… ತಕ್ಷಣ ನಾನು ಎಚ್ಚೆತ್ತೆ- ಸಂಭಾವ್ಯ ರೈಲು ಅವಘಡ ತಪ್ಪಿಸಿದ ವೃದ್ದ ಮಹಿಳೆ

ಲೋಕೋಪೈಲೆಟ್ ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳು ಸುಮಾರು ಅರ್ಧ ತಾಸಿ‌ನ ಬಳಿಕ ಮರವನ್ನು ತೆರವು ಮಾಡಿದ್ದಾರೆ. ವೃದ್ದೆ ಚಂದ್ರಾವತಿ ಅವರ ಸಮಯೋಚಿತ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 04, 2023 | 3:26 PM

ಮಂಗಳೂರು: ರೈಲ್ವೆ ಹಳಿಗೆ ಮರ (tree) ಬಿದ್ದಿದ್ದನ್ನ ಕಂಡ ವೃದ್ದ ಮಹಿಳೆಯೊಬ್ಬರು (woman) ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ರೈಲು ಅವಘಡ ತಪ್ಪಿಸಲು ಕೈಯಲ್ಲಿ ಕೆಂಪು ವಸ್ತ್ರ ಹಿಡಿದು ರೈಲಿನ (train) ಮುಂದೆ ವೃದ್ದೆ ಸಾಹಸ ತೋರಿದ್ದಾರೆ. ಮಂಗಳೂರು ಹೊರವಲಯದ (Mangalore outskirts) ಪಚ್ಚನಾಡಿ ಸಮೀಪದ ಮಂದಾರ (Mandara) ಬಳಿ ಈ ಘಟನೆ ನಡೆದಿದೆ. ರೈಲು ಹಳಿಗೆ ಮರ ಬಿದ್ದಿರುವುದನ್ನು 70 ವರ್ಷ ವಯಸ್ಸಿನ ಚಂದ್ರಾವತಿ ಗಮನಿಸಿದ್ದರು. ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನ ಗಮನಿಸಿದ ಚಂದ್ರಾವತಿ ಅವರು ತಕ್ಷಣ ಮನೆಗೆ ಓಡೋಡಿ ಹೋಗಿ ಕೆಂಪು ಬಟ್ಟೆಯೊಂದನ್ನು ತಂದು ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮೈಸೂರು: ಅಬ್ಬಬ್ಬಾ., ಕಾಡೆಮ್ಮೆಯನ್ನು ಅಟ್ಟಿಸಿಕೊಂಡು ಬಂದ ಹುಲಿರಾಯ, ಎದೆ ಝಲ್ ಎನ್ನುವ ವಿಡಿಯೋ ವೈರಲ್

ಇನ್ನು ಲೋಕೋಪೈಲೆಟ್ ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳು ಸುಮಾರು ಅರ್ಧ ತಾಸಿ‌ನ ಬಳಿಕ ಮರವನ್ನು ತೆರವು ಮಾಡಿದ್ದಾರೆ. ವೃದ್ದೆ ಚಂದ್ರಾವತಿ ಅವರ ಸಮಯೋಚಿತ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಮಧ್ಯಾಹ್ನ ಊಟ ಮಾಡಿ ಮಲಗುವಷ್ಟರಲ್ಲಿ ಮರ ಬಿದ್ದ ಶಬ್ದ ಕೇಳಿತ್ತು… ತಕ್ಷಣ ನಾನು ಎಚ್ಚೆತ್ತೆ- ವೃದ್ಧೆ ಚಂದ್ರಾವತಿ

ಮಂಗಳೂರು: ರೈಲು ಅವಘಡ ತಪ್ಪಿಸಲು ಕೆಂಪು ವಸ್ತ್ರ ಹಿಡಿದು ಸ್ಥಳೀಯ ವೃದ್ದೆಯೊಬ್ಬರು ಸಮಯಪ್ರಜ್ಞೆ ಮತ್ತು ಸಾಹಸ ತೋರಿರುವ ವಿಚಾರವಾಗಿ ವೃದ್ಧೆ ಚಂದ್ರಾವತಿಗೆ ಮಂಗಳೂರು ರೈಲ್ವೆ ಪೊಲೀಸರು ಅಭಿನಂಧನೆ ಸಲ್ಲಿಸಿದ್ದಾರೆ. ಮಂಗಳೂರು ರೈಲ್ವೇ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಕೊಟ್ಟಾರಿ ತಂಡ ವೃದ್ದೆಯ ಮನೆಗೆ ಭೇಟಿ ನೀಡಿ, ಸಂಭಾವ್ಯ ರೈಲು ಅವಘಡ ತಪ್ಪಿಸಿದ ವೃದ್ಧೆ ಚಂದ್ರಾವತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಟಿವಿ 9 ಜೊತೆ ಮಾತನಾಡಿದ ಚಂದ್ರಾವತಿ ಅವರು ದೇವರೆ ನನ್ನಿಂದ ಈ ಕೆಲಸ ಮಾಡಿಸಿದ್ದಾರೆ. ಮಧ್ಯಾಹ್ನ ಊಟ ಮಾಡಿ ಮಲಗುವಷ್ಟರಲ್ಲಿ ಮರ ಬಿದ್ದ ಶಬ್ದ ಕೇಳಿತು. ರೈಲ್ವೆ ಹಳಿ ಬಳಿ ಬಂದು ನೋಡಿದಾಗ ಬೃಹದಾಕಾರದ ಮರ ಟ್ರ್ಯಾಕ್ ಮೇಲೆ ಬಿದ್ದಿರುವುದು ಗಮನಕ್ಕೆ ಬಂದಿತ್ತು. ಅದೇ ಹೊತ್ತಲ್ಲಿ ಮಂಗಳೂರಿನಿಂದ ಮುಂಬೈಗೆ ತೆರಳುವ ಮತ್ಸ್ಯಗಂಧ ರೈಲು ಬರುವ ಬಗ್ಗೆ ಗೊತ್ತಿತ್ತು. ತಕ್ಷಣ ಮನೆಯಲ್ಲಿದ್ದ ಕೆಂಪು ಬಟ್ಟೆ ಹಿಡಿದುಕೊಂಡು ರೈಲು ಬರುವಾಗ ತೋರಿಸಿದೆ. ನಾನು ಕೆಂಪು ಬಟ್ಟೆ ಹಿಡಿದು ನಿಂತಿರುವುದನ್ನು ಗಮನಿಸಿ, ಲೋಕೋ ಪೈಲೆಟ್ ರೈಲು ನಿಲ್ಲಿಸಿದರು. ತಕ್ಷಣ, ಪ್ರಯಾಣಿಕರು ಮತ್ತು ಲೋಕೋ ಪೈಲೆಟ್ ಧನ್ಯವಾದ ತಿಳಿಸಿದರು. ಆ ಬಳಿಕ ಮರ ತೆರವು ಮಾಡಿ ರೈಲು ಮುಂಬೈ ಕಡೆ ತೆರಳಿತು ಎಂದು ಚಂದ್ರಾವತಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:38 am, Tue, 4 April 23