Karnataka Assembly Polls: ವರುಣಾದಲ್ಲಿ ಸಿದ್ದರಾಮಯ್ಯ ಪರ ಮತದಾರರ ಮುಂದೆ ಎಮೋಶನಲ್ ಕಾರ್ಡ್ ಪ್ಲೇ ಮಾಡುತ್ತಿರುವ ಯತೀಂದ್ರ ಸಿದ್ದರಾಮಯ್ಯ
ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಜೆಡಿಎಸ್ ಮತ್ತು ಬಿಜೆಪಿ ಒಂದುಗೂಡಿ ಷಡ್ಯಂತ್ರವೊಂದನ್ನು ರಚಿಸಿ ಅವರನ್ನು ಸೋಲಿಸುತ್ತಾರೆ, ಹಾಗಾಗಲು ಬಿಡಬೇಡಿ, ಎಂದು ಯತೀಂದ್ರ ಹೇಳುತ್ತಿದ್ದಾರೆ
ಮೈಸೂರು: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ (Siddaramaiah) ಪರ ಅವರ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಪ್ರಚಾರ ಮಾಡುತ್ತಿದ್ದಾರೆ. ತಮ್ಮ ತಂದೆಯನ್ನು ಗೆಲ್ಲ್ಲಿಸುವಂತೆ ಕ್ಷೇತ್ರದ ಮತದಾರರಿಗೆ ಯತೀಂದ್ರ ಭಾವನಾತ್ಮಕವಾಗಿ ಅಪೀಲ್ ಮಾಡುತ್ತಿದ್ದಾರೆ. ಅವರಿಗೀಗ 76 ವರ್ಷ, ಈ ಚುನಾವಣೆಯ ನಂತರ ಅವರು ಚುನಾವಣಾ ರಾಜಕೀಯದಿಂದ (electoral politics) ನಿವೃತ್ತರಾಗುತ್ತಾರೆ, ಹಾಗಾಗಿ ಅವರನ್ನು ಗೆಲ್ಲಿಸಿ ಅಂತ ಯತೀಂದ್ರ ಎಮೋಶನಲ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಜೆಡಿಎಸ್ ಮತ್ತು ಬಿಜೆಪಿ ಒಂದುಗೂಡಿ ಷಡ್ಯಂತ್ರವೊಂದನ್ನು ರಚಿಸಿ ಅವರನ್ನು ಸೋಲಿಸುತ್ತಾರೆ, ಹಾಗಾಗಲು ಬಿಡಬೇಡಿ, ಎಂದು ಯತೀಂದ್ರ ಹೇಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 04, 2023 10:08 AM
Latest Videos