Karnataka Assembly Polls: ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಯೋಗ್ಯ ಅಭ್ಯರ್ಥಿಗಳು ಸಿಗುತ್ತಿಲ್ಲ, ಪಿಎಸ್ ಐ ಹಗರಣದ ಪ್ರಮುಖ ಆರೋಪಿಗೆ ಟಿಕೆಟ್!
ಹಗಲು ರಾತ್ರಿ ಬೆವರು ಸುರಿಸಿ ದುಡಿದು ದೇಶದ ಜನರಿಗೆ ಅನ್ನ ಒದಗಿಸುವ ಒಬ್ಬ ರೈತನಿಗೆ ಟಿಕೆಟ್ ನೀಡಿದರೂ ಕನ್ನಡಿಗರಿಂದ ಭೇಷ್ ಅನಿಸಿಕೊಳ್ಳುವ ಕಾರ್ಯವಾಗುತ್ತಿತ್ತು.
ಕಲಬುರಗಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿರುವ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) 2023 ವಿಧಾನಸಭಾ ಚುನಾವಣೆಯಲ್ಲಿ ಏನು ಸಾಧಿಸ ಹೊರಟಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಸುದ್ದಿಯೇನೆಂದರೆ ಅವರು ಕಲಬುರಗಿ ಜಿಲ್ಲೆ ಅಫ್ಜಲಪುರ ಮತಕ್ಷೇತ್ರದ (Afzalpur constituency) ಟಿಕೆಟನ್ನು ಪಿಎಸ್ ಐ ನೇಮಕಾತಿ ಹಗರಣದಲ್ಲಿ ರೂವಾರಿ ಎಂದು ಕುಖ್ಯಾತರಾಗಿರುವ ರುದ್ರಗೌಡ ಪಾಟೀಲ್ ಗೆ (Rudragowda Patil) ಟಿಕೆಟ್ ನೀಡುವ ನಿರ್ಧಾರ ಮಾಡಿದ್ದಾರೆ! ಅಫ್ಜಲಪುರದಲ್ಲಿ ಅಭ್ಯರ್ಥಿಯನ್ನು ಹಾಕಲೇಬೇಕೆಂಬ ಉತ್ಸುಕತೆ ರೆಡ್ಡಿಯವರಿಗಿದ್ದರೆ, ಆ ಭಾಗದಲ್ಲಿ ಬೇರೆ ಯಾವುದೇ ಯೋಗ್ಯ ವ್ಯಕ್ತಿ ಸಿಗುತ್ತಿರಲಿಲ್ಲವೇ? ಹಗಲು ರಾತ್ರಿ ಬೆವರು ಸುರಿಸಿ ದುಡಿದು ದೇಶದ ಜನರಿಗೆ ಅನ್ನ ಒದಗಿಸುವ ಒಬ್ಬ ರೈತನಿಗೆ ಟಿಕೆಟ್ ನೀಡಿದರೂ ಕನ್ನಡಿಗರಿಂದ ಭೇಷ್ ಅನಿಸಿಕೊಳ್ಳುವ ಕಾರ್ಯವಾಗುತ್ತಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos