Karnataka Assembly Polls: ಕೆಪಿಸಿಸಿ ಕಚೇರಿ ಮುಂದೆ ತಮ್ಮ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರ ಮೇಲೆ ರೇಗಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಕಾರಲ್ಲಿ ಬಂದ ತಕ್ಷಣ ಕಾರ್ಯಕರ್ತರೆಲ್ಲ ಕಾರನ್ನು ಸುತ್ತುವರಿದು ಯೋಗೇಶ್ ಬಾಬು ಪರ ಘೋಷಣೆ ಕೂಗುತ್ತಾರೆ.
ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಇರುವೆಡೆ ಜನ ಮುತ್ತಿಕೊಳ್ಳೋದು ಸಾಮಾನ್ಯ ಸಂಗತಿ. ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿ ಬಳಿಯೂ ಅದೇ ಆಗಿದ್ದು. ಕಚೇರಿಯ ಮುಂದೆ ಸೇರಿರುವ ಕಾರ್ಯಕರ್ತರ ಸಂಖ್ಯೆ ಗಮನಿಸಿ. ಅವರೆಲ್ಲ ಚಿತ್ರದುರ್ಗ ಜಿಲ್ಲೆಯ ಮೊಣಾಕಾಲ್ಮೂರು ಕ್ಷೇತ್ರದಿಂದ ಬಂದಿದ್ದರು ಅಂತೆನಿಸುತ್ತದೆ. ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಕಾರಲ್ಲಿ ಬಂದ ತಕ್ಷಣ ಕಾರ್ಯಕರ್ತರೆಲ್ಲ ಕಾರನ್ನು ಸುತ್ತುವರಿದು ಯೋಗೇಶ್ ಬಾಬು (Yogesh Babu) ಪರ ಘೋಷಣೆ ಕೂಗುತ್ತಾರೆ ಮತ್ತು ಸಿದ್ದರಾಮಯ್ಯರನ್ನು ಕಚೇರಿಯೊಳಗೆ ಹೋಗದಂತೆ ತಡೆಯುತ್ತಾರೆ. ಆಗಲೇ ತಾಳ್ಮೆ ಕಳೆದುಕೊಳ್ಳುವ ಸಿದ್ದರಾಮಯ್ಯ ಕಾರ್ಯಕರ್ತರನ್ನು ಗದರುತ್ತಾರೆ. ಪ್ರಕಾಶ್ ರಾಠೋಡ್, ಜಮೀರ್ ಅಹ್ಮದ್ ಮೊದಲಾದವರು ಸಿದ್ದರಾಮಯ್ಯ ಜೊತೆ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

